ಉಡುಪಿ- ಉಚ್ಚಿಲ ದಸರಾ-2024 : ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ (Udupi – Uchila Dasara, Masquerade Compitition of Sri Sharada Matha)
ಉಡುಪಿ – ಉಚ್ಚಿಲ ದಸರಾ-2024 : ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ
(Uchila) ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ-2024ರ 3ನೇ ದಿನವಾದ ಶನಿವಾರ ಮುದ್ದು ಮಕ್ಕಳಿಗಾಗಿ ನಡೆದ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯಲ್ಲಿ 60ಕ್ಕೂ ಪುಟಾಣಿಗಳು ಭಾಗವಹಿಸುವ ಮೂಲಕ ದಸರಾ ಮಹೋತ್ಸವಕ್ಕೆ ಮೆರುಗು ನೀಡಿದರು.
ಶ್ರೀಮತಿ ಶಾಲಿನ ಡಾ.ಜಿ. ಶಂಕರ್ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಅದ್ವಿತಿ ಎ.ಪೂಜಾರಿ ಕೋಟ ಪ್ರಥಮ ಪ್ರಶಸ್ತಿ ಸಹಿತ ಸಗದು ರೂ.10,000 ಪಡೆದರೆ, ತಪಸ್ಯ ನಾಗಪ್ರಸಾದ್ ಮಲ್ಪೆ ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ. 6,೦೦೦, ಸನಿಹ ಕೆ. ಕಾಪು ತೃತೀಯ ಪ್ರಶಸ್ತಿ ಸಹಿತ ನಗದು ರೂ.3,೦೦೦ ಪಡೆದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ರೂ.1,೦೦೦ ನಗದು ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜಿ.ಪಂ. ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ರವೀಂದ್ರ ಶ್ರೀಯಾನ್, ವಿಶ್ವಾಸ್ ವಿ. ಅಮೀನ್, ಸತೀಶ್ ಅಮೀನ್ ಪಡುಕರೆ ಪ್ರಶಸ್ತಿ ವಿತರಿಸಿದರು.
ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪದ್ಮಾ ಅಶ್ವಿನ್ ಪ್ರಭು, ರಶ್ಮಿ ಸರಳಾಯ ಮತ್ತು ದೀಪ್ತಿಶ್ರೀ ಜೋಗಿ ತೀರ್ಪುಗಾರರಾಗಿದ್ದರು.