ಉಡುಪಿ: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಅಂಬುಲೆನ್ಸ್, ಚಾಲಕ ಪಾರು (Udupi: Ambulence rammed in to Janaushadhi Centre, Driver escaped)
(Udupi)ಉಡುಪಿ: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಅಂಬುಲೆನ್ಸ್, ಚಾಲಕ ಪಾರು
ಉಡುಪಿ: ಸೋಮವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಉಡುಪಿಯ ಲಕ್ಷ್ಮೀಂದ್ರ ನಗರದ ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೆಲ್ ಹಾಗೂ ಜನೌಷಧಿ ಮೆಡಿಕಲ್ ಗೆ ಅಂಬುಲೆನ್ಸ್ ನುಗ್ಗಿದ್ದು, ರಾತ್ರಇಯಾದುದರಿಂದ ಸಂಭಾವ್ಯ ಅಪಾಯವೊಂದು ತಪ್ಪಿದೆ.
ಮಣಿಪಾಲ ಕಡೆಯಿಂದ ಬರುತ್ತಿದ್ದ ಆಂಬುಲೆನ್ಸ್, ಡಿವೈಡರ್ ನ ಗ್ಯಾಪ್ ನಲ್ಲಿ ಬಲಕ್ಕೆ ತಿರುಗಿ ಮೆಡಿಕಲ್ ಶಾಪ್ ಗೆ ನುಗ್ಗಿದೆ. ಅಂಬು ಅಂಬುಲೆನ್ಸ್ನ ಬ್ರೇಕ್ ಫೇಲ್ ಆಗಿರುವುದರಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದಾನೆ. ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೆಲ್ ಹಾಗೂ ಜನೌಷಧಿ ಮೆಡಿಕಲ್ ಗೆ ಅಪಾರ ಹಾನಿಯಾಗಿದೆ.
ತಡರಾತ್ರಿ ಯಾವುದೇ ವಾಹನ ಸಂಚಾರ, ಜನ ಸಂಚಾರ ಇಲ್ಲದೆ ಇರುವುದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಏಕಾಏಕಿ ವಾಹನ ನುಗ್ಗಿ ಸಂಭವಿಸಿರುವ ಅಪಘಾತ ಸ್ಥಳ ಕಾಣಲು ಭೀಕರವಾಗಿದೆ.