# Tags
#ಕರಾವಳಿ #ಜೀವನಶೈಲಿ #ವಿಡಿಯೋ

ಉಡುಪಿ: ಜಾಗತಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳನದ ಮೆರವಣಿಗೆಗೆ ಚಾಲನೆ (Vishwa Banta Sammelana)

ಉಡುಪಿ: ಜಾಗತಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳದ ಮೆರವಣಿಗೆಗೆ ಚಾಲನೆ

vishwa banta sammelana udupi

ಉಡುಪಿ: ಜಾಗತಿಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಎರಡು ದಿನಗಳ ವಿಶ್ವ ಬಂಟರ ಸಮ್ಮೇಳನ‌ದ ಉದ್ಘಾಟನೆಗೆ ಮೊದಲು ಶನಿವಾರ ಬೆಳಿಗ್ಗೆ ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಜ್ಜರಕಾಡು ಮೈದಾನದವರೆಗೆ ನಡೆದ ಬೃಹತ್ ಮೆರವಣಿಗೆ ಸಮ್ಮೇಳನದ ಅದ್ದೂರಿತನಕ್ಕೆ ಸಾಕ್ಷಿಯಂತಿತ್ತು.

  ಮೆರವಣಿಗೆಯು  ಕವಿಮುದ್ದಣ ಮಾರ್ಗದ ಮೂಲಕ ಹಳೆ ಡಯನಾ ವೃತ್ತ, ಕೋರ್ಟ್ ರಸ್ತೆಯಾಗಿ ಬಿಗ್ ಬಜಾರ್ ಮೂಲಕ ಭುಜಂಗ ಪಾರ್ಕ್ ದಾಟಿ ಅಜ್ಜರಕಾಡು ಮೈದಾನವನ್ನು ಪ್ರವೇಶಿಸಿತು.

  ಈ ಮೆರವಣಿಗೆಯಲ್ಲಿ ದೇಶದ ವಿವಿಧ ಭಾಗಗಳ ಬಂದ ಸುಮಾರು 62 ಕ್ಕೂ ಅಧಿಕ ಬಂಟರ ಸಂಘಗಳ 6 – 7 ಸಾವಿರಕ್ಕೂ  ಅಧಿಕ‌ ಮಂದಿ‌ ಭಾಗವಹಿಸಿದ್ದರು.

ಈ ಸಂಘಟನೆಗಳು ತಮ್ಮದೇ ಆದ ವೈವಿಧ್ಯಮಯ ಸಮವಸ್ತ್ರಗಳೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು.

  ಅಲ್ಲದೆ ಮೆರವಣಿಗೆಯಲ್ಲಿ ಉಡುಪಿಯ ಕಡೆಗೋಲು ಕೃಷ್ಣ, ಕಟೀಲು ದುರ್ಗಾಪರಮೇಶ್ವರಿ, ಗುತ್ತಿನ ಮನೆ ಮುಂತಾದ ಸ್ತಬ್ಧ ಚಿತ್ರಗಳು, ಕಂಬಳದ ಕೋಣಗಳು, ಕೇರಳದ ತೈಯ್ಯಂ, ಹುಲಿ ವೇಷ, ಕೀಲು ಕುದುರೆ ಗೊಂಬೆಗಳು, ಹೊನ್ನಾವರ ಬ್ಯಾಂಡ್ ಸೆಟ್, ಅಗೋಳಿ ಮಂಜಣ್ಣನ ವೇಷಧಾರಿ, ಚೆಂಡೆ, ವಾದ್ಯ, ಡೋಲು, ನಾಗಸ್ವರ, ಬಣ್ಣದ ಕೊಡೆಗಳು ಹಾಗೂ ವಿವಿಧ ವಿನೋದಾವಳಿಗಳು ಮೆರವಣಿಗಯೆ ಮೆರುಗು ಹೆಚ್ಚಿಸಿದ್ದವು.

  ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ Puttige Matt Sugunendra Swamiji), ಬಾರ್ಕೂರು ಸಂಸ್ಥಾನದ ಶ್ರೀ ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ (Laxmi Nrayana Asranna) ಮತ್ತು ಒಕ್ಕೂಟದ ಪದಾಧಿಕಾರಿಗಳನ್ನು ಮೆರವಣಿಗೆಯಲ್ಲಿ ರಥ ವಾಹನದಲ್ಲಿ ವೇದಿಕೆಗೆ ಕರೆ ತರಲಾಯಿತು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2