# Tags
#ರಾಜಕೀಯ

ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ (Prabhakara Poojary was elected as the new President oF Udupi Munsipality, and Rajani hebbar as the vice President)

ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆ

 (Udupi) ಉಡುಪಿ: ಉಡುಪಿ ನಗರಸಭೆಯ ನೂತನ ಅಧ್ಯಕ್ಷರಾಗಿ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ರಜನಿ ಹೆಬ್ಬಾರ್ ಆಯ್ಕೆಯಾಗಿದ್ದಾರೆ.  

 ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾಭವನದಲ್ಲಿ ಶುಕ್ರವಾರ ಚುನಾವಣಾ ಪ್ರಕ್ರಿಯೆಯನ್ನು ಕುಂದಾಪುರ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ ನಡೆಸಿಕೊಟ್ಟರು. ಪೌರಾಯುಕ್ತ ರಾಯಪ್ಪ ಉಪಸ್ಥಿತರಿದ್ದರು.

 ಅಧ್ಯಕ್ಷ ಹುದ್ದೆ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿದ್ದು, ಉಡುಪಿ ನಗರಸಭೆಯ 10ನೇ ಅವಧಿಗೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಎರಡನೇ ಬಾರಿ ಗುಂಡಿಬೈಲು ವಾರ್ಡ್ ಹಾಗೂ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಮೊದಲ ಬಾರಿ ಒಳಕಾಡು ವಾರ್ಡ್ ಪ್ರತಿನಿಧಿಸುತ್ತಿದ್ದಾರೆ.

 ನಗರಸಭೆಯಲ್ಲಿ ಬಿಜೆಪಿ 32, ಕಾಂಗ್ರೆಸ್ ಮೂವರು ಸದಸ್ಯರನ್ನು ಹೊಂದಿದ್ದು, ಒಂದು ವರ್ಷ ಮೂರು ತಿಂಗಳ ಕಾಲ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದರು. ಇನ್ನು ಒಂದು ವರ್ಷ ಎರಡು ತಿಂಗಳ ಅಧಿಕಾರಾವಧಿಯನ್ನು ನೂತನ ಅಧ್ಯಕ್ಷ-ಉಪಾಧ್ಯಕ್ಷರು ಹೊಂದಿದ್ದಾರೆ.

 ಅಧ್ಯಕ್ಷ ಸ್ಥಾನಕ್ಕೆ ಪ್ರಭಾಕರ ಪೂಜಾರಿ ಹಾಗೂ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದು, ಟಿ.ಬಾಲಕೃಷ್ಣ ಶೆಟ್ಟಿ ಸುಮಿತ್ರಾ’ ನಾಯಕ್, ಮಂಜುನಾಥ್ ಮಣಿಪಾಲ, ಅಶೋಕ್ ನಾಯ್ಕ ಸೂಚಕರಾಗಿದ್ದರು. ಹರೀಶ್ ಶೆಟ್ಟಿ, ಅಶೋಕ್ ನಾಯ್ಕ, ರಶ್ಮಿ ಸಿ.ಭಟ್, ಸುಮಿತ್ರಾ ನಾಯಕ್ ಅನುಮೋದಕರಾಗಿದ್ದರು.

 ನಗರಸಭೆ ಪ್ರತಿಪಕ್ಷ ನಾಯಕ ರಮೇಶ ಕಾಂಚನ್, ವಿಜಯ ಪೂಜಾರಿ, ವಿಜಯ ಕೊಡವೂರು, ಸುಮಿತ್ರಾ ನಾಯಕ್, ಗಿರೀಶ್ ಅಂಚನ್, ಬಾಲಕೃಷ್ಣಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷರಾದ ದಿನಕರ ಶೆಟ್ಟಿ ಹೆರ್ಗ, ಕಿರಣ್ ಕುಮಾರ್ ಬೈಲೂರು, ಟಿ.ಜಿ.ಹೆಗ್ಡೆ ಮಾತನಾಡಿದರು.

ಬಿಜೆಪಿ ಕಚೇರಿಯಲ್ಲಿ ಗುರುವಾರ ವೀಕ್ಷಕ ಕ್ಯಾ.ಗಣೇಶ್ ಕಾರ್ಣಿಕ್, ಉಡುಪಿ ಶಾಸಕರ ಉಪಸ್ಥಿತಿಯಲ್ಲಿ ಅಭಿಪ್ರಾಯ ಪಡೆದು ಅಂತಿಮವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪ್ರಭಾಕರ್ ಪೂಜಾರಿ ಹಾಗೂ ರಜನಿ ಹೆಬ್ಬಾರ್ ಅವಿರೋಧ ಆಯ್ಕೆಗೆ ನಿರ್ಧರಿಸಲಾಗಿತ್ತು.  

ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಸಹಿತ ಬಿಜೆಪಿ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2