ಉಡುಪಿ: ರಸ್ತೆ ಬದಿಗೆ ಉರುಳಿಬಿದ್ದ ಟ್ಯಾಂಕರ್, ಚಾಲಕ ಪಾರು (Udupi Tanker overturned on road side : Driver safe)
ಉಡುಪಿ: ರಸ್ತೆ ಬದಿಗೆ ಉರುಳಿಬಿದ್ದ ಟ್ಯಾಂಕರ್, ಚಾಲಕ ಪಾರು
(Udupi) ಉಡುಪಿ: ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ನಗರದ ಸಂತೆಕಟ್ಟೆ ಬಳಿ ಸಂಭವಿಸಿದ್ದು, ಪವಾಡ ಸದೃಷ ಚಾಲಕ ಪಾರಾದ ಗಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಟ್ಯಾಂಕರ್ ಸಂತೆಕಟ್ಟೆ ನಿರ್ಮಾಣ ಹಂತದ ಕೆಳಸೇತುವೆ ಪ್ರದೇಶವನ್ನು ಹಾದು ಹೋದ ನಂತರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಜೂನ್ 08 ರಂದು ಶನಿವಾರ ಬೆಳಗ್ಗೆ ಘಟನೆ ಘಟಿಸಿದ್ದು, ಟ್ಯಾಂಕರ್ ಚಾಲಕ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮುಚ್ಚಿದ ಸರ್ವಿಸ್ ರಸ್ತೆಯನ್ನು ಮೀರಿದ್ದು, ಕೆಸರು ರಸ್ತೆಯಿಂದಾಗಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಟ್ಯಾಂಕರ್ ಪಲ್ಟಿಯಾಗಿ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್ ನಿರ್ಮಾಣ ಪ್ರದೇಶಕ್ಕೆ ಬಿದ್ದಿದೆ. ಘಟನೆಯಲ್ಲಿ ಚಾಲಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ ಎನ್ನಲಾಗಿದೆ.