ಉಡುಪಿ ರಾಜಾಂಗಣದಲ್ಲಿ ನೂರಾರು ಪುಟಾಣಿ ಗಳಿಂದ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ (Krishna Leelothsava at Udupi Rajangana)
ಉಡುಪಿ ರಾಜಾಂಗಣದಲ್ಲಿ ನೂರಾರು ಪುಟಾಣಿ ಗಳಿಂದ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ
(Udupi) ಉಡುಪಿ: ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಸಹಯೋಗದಲ್ಲಿ ರಾಜಾಂಗಣದಲ್ಲಿ ಪುಟಾಣಿಗಳ ಶ್ರೀ ಕೃಷ್ಣ ಲೀಲೋತ್ಸವ ನೆರವೇರಿತು.
ಪೂಜ್ಯ ಸ್ವಾಮೀಜಿಯವರು ಪದ್ಮಶಾಲಿ ಪ್ರತಿಸ್ಠಾನದ ಕೈ ಮಗ್ಗ ಸೀರೆಗಳ ಉತ್ಸವಕ್ಕೆ ರಾಜಾಂಗಣದಲ್ಲಿ ಅವಕಾಶ ಮಾಡಿಕೊಟ್ಟು 11 ದಿನ ಗಳ ಕಾಲ ವಿವಿಧ ಕಾರ್ಯಕ್ರಮ ನಡೆಸುವಲ್ಲಿ ಪ್ರೋತ್ಸಾಹ ನೀಡಿರುತ್ತಾರೆ.
ಉಡುಪಿಯ ಭಕ್ತರ ಪಾಲಿಗೆ ರಾಜಾಂಗಣದಲ್ಲಿ ನಡೆದ ಶ್ರೀ ಕೃಷ್ಣ ಲೀಲೋತ್ಸವ ಭಕ್ತಿ ಸಾಗರದಲ್ಲಿ ತೆತೇಲುವಂತೆ ಮಾಡಿದೆ.
ಏಳು ತಂಡದ ನೂರಾರು ಮಕ್ಕಳು ಕೃಷ್ಣನ ವಿವಿಧ ಲೀಲೆ ಗಳ ಪ್ರದರ್ಶನದ ಮೂಲಕ ಸಾವಿರಾರು ಭಕ್ತಾಧಿಗಳನ್ನು ತಲೆದೂಗುವಂತೆ ಮಾಡಿದ್ದಾರೆ.