ಉಡುಪಿ: ಶ್ರೀಮತಿ ಉಷಾಗೆ ಪಿಹೆಚ್.ಡಿ. ಪದವಿ (Mrs usha got PHD degree)
ಉಡುಪಿ: ಶ್ರೀಮತಿ ಉಷಾಗೆ ಪಿಹೆಚ್.ಡಿ. ಪದವಿ
(Udupi) ಉಡುಪಿ: ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಉಷಾರವರಿಗೆ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್‌ಸ್ರ್ಟೀಟ್, ಮಂಗಳೂರು, ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಾಲ್ಟರ್ ಡಿಸೋಜರವರ ಮಾರ್ಗದರ್ಶನದಲ್ಲಿ ಇಂಪ್ಯಾಕ್ಟ್ ಆಫ್ ಜಿಎಸ್‌ಟಿ (ಗೂಡ್ಸ್ ಆಂಡ್ ಸರ್ವೀಸಸ್ ಟ್ಯಾಕ್ಸ್) ಆನ್ ಎಂಎಸ್‌ಎಂಇ ಸೆಕ್ಟರ್ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು.
ಶ್ರೀಮತಿ ಉಷಾರವರು ರಾಮಪೂಜಾರಿ, ಶ್ರೀಮತಿ ಸುಮತಿಯವರ ಪುತ್ರಿ ಹಾಗೂ ಪುತ್ತೂರು ಮಹೇಶ್ ಸುವರ್ಣರವರ ಪತ್ನಿ.