ಉಡುಪಿ : ಸಗ್ರಿ ನೊಳೆ ಹತ್ತಿರದ ಕಿರು ಸೇತುವೆ ಕುಸಿತ : (Collapse of short bridge near Sagrinole)
ಉಡುಪಿ : ಸಗ್ರಿ ನೊಳೆ ಹತ್ತಿರದ ಕಿರು ಸೇತುವೆ ಕುಸಿತ : (Collapse of short bridge near Sagrinole)
(Udupi) ಉಡುಪಿ : ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ ಕುಸಿದಿದ್ದು ಉಡುಪಿ ನಗರಕ್ಕೆ ಸುತ್ತು ಬಳಸಿ ಬರಬೇಕಿದೆ.
ಈ ವರ್ಷ ಭಾರೀ ಮಳೆಯಾಗಿದ್ದು, ಅನೇಕ ಆವಾಂತರ ಸೃಷ್ಟಿ ಮಾಡಿದೆ. ಮಳೆಯ ರಭಸಕ್ಕೆ ಸಣ್ಣ ಪುಟ್ಟ ಸೇತುವೆಗಳು ಕುಸಿದು ರಸ್ತೆ ಸಂಚಾರ ಬಂದ್ ಆಗಿದ್ದವು. ಈಗ ಸಗ್ರಿ ನೊಳೆಯ ಹತ್ತಿರದ ಕಿರು ಸೇತುವೆ ಕುಸಿದು ಸಂಚಾರಕ್ಕೆ ತೊಡಕಾಗಿದೆ.
ದೊಡ್ಡಣಗುಡ್ಡೆಯಿಂದ ಒಳದಾರಿಯಾಗಿ ಎಂಜಿಎಂ ಕಾಲೇಜು ಸಂಪರ್ಕಿಸುವ ರಸ್ತೆಯ ಚಕ್ರತೀರ್ಥ ಎಂಬಲ್ಲಿನ ಕಿರುಸೇತುವೆ ಇತ್ತೀಚಿಗೆ ಕುಸಿದು ಇದೀಗ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಇದೀಗ ಪೆರಂಪಳ್ಳಿ- ಸಗ್ರಿಯಿಂದ ಇಂದ್ರಾಳಿ, ಉಡುಪಿಗೆ ಸಂಪರ್ಕಿಸುವ ರಸ್ತೆ ಮದ್ಯೆ ಇರುವ ಕಿರುಸೇತುವೆ ಕುಸಿದಿದ್ದು ಈಗಾಗಲೇ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಆದರೂ ಸಹ ರಿಕ್ಷ, ದ್ವಿಚಕ್ರ ವಾಹನ ಸವಾರರು ಕುಸಿದಿರುವ ಕಿರು ಸೇತುವೆ ಮೂಲಕ ಸಾಗುತ್ತಿರುವುದರಿಂದ ಮತ್ತಷ್ಟು ರಸ್ತೆ ಕುಸಿದಿದೆ. ಮಾತ್ರವಲ್ಲದೇ ಅಪಾಯವನ್ನು ಆಹ್ವಾನಿಸುತ್ತಿದೆ.
ಸುತ್ತ ಮುತ್ತ ನೂರಾರು ಮನೆಗಳಿದ್ದು ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಸಮಸ್ಯೆ ಆಗಿದೆ. ಇಂದ್ರಾಳಿ, ಎಂಜಿಎಂ ಗೆ ಶಾಲೆಗೆ ಹೋಗಲು ಮಕ್ಕಳಿಗೆ ಹಾಗೂ ಕಚೇರಿಗೆ ತೆರಳುವ ಸಿಬ್ಬಂದಿಗಳಿಗೆ ಭಾರೀ ಸಮಸ್ಯೆ ಆಗಿದ್ದು, ಒಂದು ಸುತ್ತು ಹೊಡೆದು ಉಡುಪಿಗೆ ಬರಬೇಕಾಗಿದೆ.
ಆದಷ್ಟು ಬೇಗ ಈ ಕಿರು ಸೇತುವೆ ದುರಸ್ಥಿಗೊಳಿಸಿ ಸಾರ್ವಜನಿಕ ಮುಕ್ತಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.