ಎರ್ಮಾಳು ಅಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ “ಸುರೇಶ್ ಎರ್ಮಾಳ್” ಆಯ್ಕೆ (Yermal Auto union president elected by Suresh yermal)
ಎರ್ಮಾಳು ಅಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ “ಸುರೇಶ್ ಎರ್ಮಾಳ್” ಆಯ್ಕೆ
(Padubidri) ಪಡುಬಿದ್ರಿ: ತೆಂಕ ಎರ್ಮಾಳು ಅಟೋ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಪತ್ರಕರ್ತ ಸುರೇಶ್ ಎರ್ಮಾಳ್ ಅವಿರೋಧವಾಗಿ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಭರತ್ ಶೆಟ್ಟಿಗಾರ್ ಮರು ಆಯ್ಕೆಯಾಗಿದ್ದಾರೆ.
ತೆಂಕ ಎರ್ಮಾಳು ಅಳ್ವೆಕೋಡಿ ಬಬ್ಬುಸ್ವಾಮಿ ದೈವಸ್ಥಾನದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಮಾರು ಮೂವತ್ತೈದು ಮಂದಿ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ಅನೇಕ ಸಮಾಜೋಮುಖಿ ಕಾರ್ಯಗಳನ್ನು ನಡೆಸಿ ಜನಾನುರಾಗಿದೆ.
ಉಪಾಧ್ಯಕ್ಷರಾಗಿ ರಾಜು ಪೂಜಾರಿ, ಕೋಶಾಧಿಕಾರಿಯಾಗಿ ಲಿಯಾಕತ್ ಆಲಿ ಹಾಗೂ ಜತೆ ಕಾರ್ಯದರ್ಶಿಯಾಗಿ ನದೀಮ್ ಎರ್ಮಾಳ್ ಮರು ಆಯ್ಕೆಯಾಗಿದ್ದಾರೆ.