# Tags
#ಧಾರ್ಮಿಕ

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ : ಷಡಾಧಾರ ಪ್ರತಿಷ್ಠೆ, ನಿಧಿ ಕುಂಭ ಸ್ಥಾಪನೆ (Karandadi Sri Vishnumoorthi Temple Nidhikubha)

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ : ಷಡಾಧಾರ ಪ್ರತಿಷ್ಠೆ, ನಿಧಿ ಕುಂಭ ಸ್ಥಾಪನೆ

 ಕಾಪು, ಮಾ. 18 : ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ವೆಚ್ಚದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಷಡಾಧಾರ ಪ್ರತಿಷ್ಠೆ, ನಿಧಿ ಕುಂಭ ಸ್ಥಾಪನೆ ಮತ್ತು ಗರ್ಭನ್ಯಾಸ ಕಾರ್ಯಕ್ರಮ ನೆರವೇರಿತು.   

ವೇ| ಮೂ| ಕಳತ್ತೂರು ಉದಯ ತಂತ್ರಿಗಳ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ ಹಾಗೂ ವೈಧಿಕ ವೃಂದದವರ ಪಾಲ್ಗೊಳ್ಳುವಿಕೆಯೊಂದಿಗೆ ಷಡಾಧಾರ ಪ್ರತಿಷ್ಠೆ, ನಿಧಿ ಕುಂಭ ಸ್ಥಾಪನೆ ಮತ್ತು ಗರ್ಭನ್ಯಾಸ ಕಾರ್ಯಕ್ರಮದ ಧಾರ್ಮಿಕ ವಿಧಿ ವಿದಾನಗಳು ಸಂಪನ್ನಗೊಂಡವು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Suresh Shetty) ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂಆರ್‌ಜಿ ಗ್ರೂಫ್ಸ್‌ನ ಅಧ್ಯಕ್ಷ ಬಂಜಾರ  ಕೆ. ಪ್ರಕಾಶ್ ಶೆಟ್ಟಿ (Banjara K Prakash Shetty) ಮಾತನಾಡಿ, ದೇವರ ಕೆಲಸವನ್ನು ನಮ್ಮೆಲ್ಲರ ಆದ್ಯತೆಯ ಕೆಲಸ ಎಂದು ತಿಳಿದುಕೊಂಡು ಮುನ್ನಡೆದಲ್ಲಿ ದೇಗುಲ ನಿರ್ಮಾಣ ಕಾರ್ಯ ಸುಸೂತ್ರವಾಗಿ ನಡೆಯಲಿದೆ. ಸಮಾಜರತ್ನ ದಿ| ಲೀಲಾಧರ ಶೆಟ್ಟಿ ಅವರ ಕನಸಿನ ಯೋಜನೆಯಾಗಿರುವ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ತಮ್ಮಿಂದಾಗುವ ರೀತಿಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು. 

ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತ್ಯಜಿತ್ ಶೆಟ್ಟಿ ಕರಂದಾಡಿಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಬ್ಯಾಂಕ್‌ನ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ (P Pradip Kumar), ಗಣ್ಯರಾದ ರಾಮದಾಸ ತಂತ್ರಿ ಜಲಂಚಾರು, ಯಾದವ ಶೆಟ್ಟಿ ಶಿಬರೂರು, ಎ.ಬಿ. ಷಾ ಬೆಂಗಳೂರು, ರಮೇಶ್ ಕೋಟಿ ಕರಂದಾಡಿ ಹಾಡಿಮನೆ, ಸುಭಾಶ್ಚಂದ್ರ ಹೆಗ್ಡೆ ಮಜೂರು ದೊಡ್ಡಮನೆ, ಮಜೂರು ಗ್ರಾ. ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ವಿಜಯ್ ಶೆಟ್ಟಿ ಕಾರ್ಕಳ, ಶಶಿಧರ ಶೆಟ್ಟಿ ತೋಕೂರುಗುತ್ತು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾದ ಲಕ್ಷ್ಮೀಜಯರಾಮ ಶೆಟ್ಟಿ ಕರಂದಾಡಿಗುತ್ತು, ಪಾಂಡುರಂಗ ಶಾನುಭಾಗ್ ಶಾನುಭಾಗರ ಮನೆ, ಗೌರವ ಸಲಹೆಗಾರ ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ಸುರೇಶ್ ಶೆಟ್ಟಿ ಕರಂದಾಡಿ ಪಡುಬರ್ಪಾಣಿ, ಮೋಹನ್ ಶೆಟ್ಟಿ ಕರಂದಾಡಿ ಬರ್ಪಾಣಿ, ಕಟ್ಟಡ ಸಮಿತಿ ಸಂಚಾಲಕ ಪ್ರೇಮನಾಥ ಶೆಟ್ಟಿ ಕರಂದಾಡಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕಿಶನ್ ಭಂಡಾರಿ ಕರಂದಾಡಿಗುತ್ತು, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಮತ್ತು ಭಜನಾ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2