ಕಾಪುವಿನಲ್ಲಿ ತಾಲ್ಲೂಕು ಮಟ್ಟದ 77 ನೇ ಸ್ವಾತಂತ್ರ್ಯ ದಿನಾಚರಣೆ – ಕಾಪು ತಹಶೀಲ್ದಾರರಿಂದ ಧ್ವಜಾರೋಹಣೆ
ಕಾಪುವಿನಲ್ಲಿ ತಾಲ್ಲೂಕು ಮಟ್ಟದ 77 ನೇ ಸ್ವಾತಂತ್ರ್ಯ ದಿನಾಚರಣೆ – ಕಾಪು ತಹಶೀಲ್ದಾರರಿಂದ ಧ್ವಜಾರೋಹಣೆ
ಕಾಪು ಕಾಪು ಸರಕಾರಿ ಕಾಲೇಜು ಆವರಣದಲ್ಲಿ ಮಂಗಳವಾರ ಕಾಪು ತಾಲ್ಲೂಕು ಮಟ್ಟದ 77 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕಾಪು ತಹಶಿಲ್ದಾರ್ ನಾಗರಾಜ್ ವಿ ನಾಯ್ಕಡ ರವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ, ದೇಶ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಹಾಗೆಂದ ಮಾತ್ರಕ್ಕೆ ಸಮಸ್ಯೆಗಳು ಇಲ್ಲವೆಂದು ಅರ್ಥವಲ್ಲ. ಅದನ್ನು ಮೀರಿ ನಿಂತು ನಾವೆಲ್ಲಾ ದೇಶದಅಭಿವೃದ್ಧಿ ಗೆ ಶ್ರಮಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ದೇಶದ ಸ್ವಾತಂತ್ರಕಾಗಿ ಲಕ್ಷಾಂತರ ಮಂದಿ ತಮ್ಮನ್ನು ಅರ್ಪಣೆ ಮಾಡಿದ್ದಾರೆ. ಅವು ಹಾಕಿಕೊಟ್ಟ ಪರಂಪರೆಯನ್ನು ನಾವು ಉಳಿಸಬೇಕಿದೆ ಎಂದರು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಹೆಚ್.ಡಿ, ಕಾಪು ಪುರಸಭೆಯ ಮುಖ್ಯಾಧಿಕಾರಿ ಸಂತೋಷ್, ಕಾಪು ವೃತ್ತ ನಿರೀಕ್ಷಕರಾದ ಕೆಸಿ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀ ಶೈಲ ಮುರುಗೋಡ, ಅಪರಾಧ ವಿಭಾಗದ ಪುರುಷೋತ್ತಮ್, ಕಾಪು ಪುರಸಭೆಯ ಸದಸ್ಯರು ಮತ್ತು ಕಾಪು ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.