ಕಾಪು ದಂಡ ತೀರ್ಥ ಪದವಿಪೂರ್ವ ಕಾಲೇಜು 99% ಫಲಿತಾಂಶ (Kaup Danda Theertha Pu College 99% Result)
ಕಾಪು ದಂಡ ತೀರ್ಥ ಪದವಿಪೂರ್ವ ಕಾಲೇಜು 99% ಫಲಿತಾಂಶ
(Kaup) ಕಾಪು: 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಪುವಿನ ಖ್ಯಾತ ವಿದ್ಯಾ ಸಂಸ್ಥೆ ಉಳಿಯಾರಗೋಳಿ ದಂಡ ತೀರ್ಥ ಪದವಿಪೂರ್ವ ಕಾಲೇಜು ಈ ಬಾರಿ 99% ಫಲಿತಾಂಶ ದಾಖಲಿಸಿದೆ.
ಒಟ್ಟು71 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದು, 70ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟು 99 ಪ್ರತಿಶತ ಫಲಿತಾಂಶ ದಾಖಲಾಗಿದೆ.
ವಿಶಿಷ್ಠ ದರ್ಜೆಯಲ್ಲಿ 26 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 37 ವಿದ್ಯಾರ್ಥಿಗಳು ಮತ್ತು ದ್ವಿತೀಯ ದರ್ಜೆಯಲ್ಲಿ 7 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ, ಅವಿರತವಾಗಿ ಶ್ರಮಿಸಿದ ಶಾಲಾ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಡಾ. ಪ್ರಶಾಂತ್ ಶೆಟ್ಟಿ (Dr Prashanth Shetty) ಅಭಿನಂದಿಸಿದ್ದಾರೆ.