ಕಾರ್ಕಳ : ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲು (Karkala Two people god gone to fishiņg drown)
ಕಾರ್ಕಳ : ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲು
(Karkala) ಕಾರ್ಕಳ : ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಮೇ 19 ರಂದು ಶಿರ್ಲಾಲು ಗ್ರಾಮದ ಮುಗೆರ್ಕಳ ಸಮೀಪದ ಉಬ್ಬರಬೈಲು ಎಂಬಲ್ಲಿ ಸಂಭವಿಸಿದೆ.
ಮುಡ್ಡಾಯಿಗುಡ್ಡೆ ನಿವಾಸಿ ಹರೀಶ್ ಪೂಜಾರಿ (48) ಮತ್ತು ಅವರ ಅಕ್ಕನ ಮಗ ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜು ವಿದ್ಯಾರ್ಥಿ ಹೃತೇಶ್ ಪೂಜಾರಿ (18) ಉಬ್ಬರಬೈಲು ಗುಂಡಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಂದರ್ಭ ನೀರಿನ ಸುಳಿಗೆ ಸಿಕ್ಕಿ ಅಸುನೀಗಿದ್ದಾರೆ.
ಘಟನಾ ಸ್ಥಳಕ್ಕೆ ಅಜೆಕಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.