ಕಾರ್ನಾಡು ಸಿಎಸ್ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ (Childrens Day Celebration at CSI Karnadu English Medium School)
ಕಾರ್ನಾಡು ಸಿಎಸ್ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ
(Mulki) ಮುಲ್ಕಿ : ಓದುವ ಸಮಯದಲ್ಲಿ ನಮ್ಮ ಗುರಿ ಸಾಧನೆಯೆಡೆಗೆ ಇದ್ದಾಗ ಮಾತ್ರ ನಿಶ್ಚಿತವಾದ ಸಾಧಕರಾಗಬಹುದು. ಹೆತ್ತವರ ಮತ್ತು ಗುರುಗಳ ಪ್ರೋತ್ಸಾಹವಿದ್ದಲ್ಲಿ ಸಾಧನೆಯೆಂಬುದು ನಿಶ್ಚಿತ ಫಲವಾಗಿದೆ. ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಗೆ ಕಡಿವಾಣ ಅಗತ್ಯ ಎಂದು ನಟ, ನಿರ್ಮಾಪಕ ಶೋಧನ್ ಶೆಟ್ಟಿ ಪಡುಬಿದ್ರಿ ಹೇಳಿದರು.
ಅವರು ಕಾರ್ನಾಡು ಸಿಎಸ್ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ನೋಟರಿ ಡೇನಿಯಲ್ ದೇವರಾಜ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರೆ. ಸ್ಟೀವನ್ ಸರ್ವೋತ್ತಮ ವಹಿಸಿ, ಶುಭ ಹಾರೈಸಿದರು.
ವೇದಿಕೆಯಲ್ಲಿ ವಿಜಯಾ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಸ್ಯಾಮ್ ಮಾಬೆನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕವಿತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ, ಶಾಲಾ ಸಂಚಾಲಕರಾದ ರಂಜನ್ ಜತ್ತನ್ನ, ಶಾಲಾ ವಿದ್ಯಾರ್ಥಿ ನಾಯಕ ಕ್ಯಾಲ್ವಿನ್, ಮುಖ್ಯ ಶಿಕ್ಷಕಿ ಝೀಟ ಮೆಂಡೋನ್ಸಾ, ಶಿಕ್ಷಕಿಯರಾದ ಆಶಾ ರೋಸ್ಲಿನ್, ಮೇವಿಸ್ ಸೋನ್ಸ್, ಪ್ರತೀಕ್ಷ, ಎಲಿಜಬೆತ್ ಪುಷ್ಪಲತ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ದಿನಾಚರಣೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.