ಕುಂತಳನಗರ : ಉಡುಪಿ ಗ್ರಾಮೀಣ ಬಂಟರ ಸಂಘದಲ್ಲಿ ಕೌಶಲ್ಯ ಮತ್ತು ವೃತ್ತಿ ಅಭಿವೃದ್ಧಿ ತರಬೇತಿ ಶಿಬಿರ (Skill and career development training camp in Grameena Buntara Sangha Manipura Kuntala Nagara)
ಕುಂತಳನಗರ : ಉಡುಪಿ ಗ್ರಾಮೀಣ ಬಂಟರ ಸಂಘದಲ್ಲಿ ಕೌಶಲ್ಯ ಮತ್ತು ವೃತ್ತಿ ಅಭಿವೃದ್ಧಿ ತರಬೇತಿ ಶಿಬಿರ
(Manipura) ಮಣಿಪುರ, ಅ.19: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕುಂತಳನಗರದ ಸ್ಕಿಲ್ ಡೆವಲಲ್‌ಮೆಂಟ್ ಸೆಂಟರ್‌ನಲ್ಲಿ ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮಣಿಪಾಲದ ವಿದ್ಯಾರ್ಥಿಗಳಿಗೆ ಒಂದು ದಿನದ ಕೌಶಲ್ಯ ಮತ್ತು ವೃತ್ತಿ ಅಭಿವೃದ್ಧಿ ತರಬೇತಿಯು ಶನಿವಾರ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಉಪಾಧ್ಯಕ್ಷ ಡಾ. ಗೋಪಾಲ್ ಮೊಗೆರಾಯ ಮುಂಡ್ಕೂರು ಮಾತನಾಡಿ, ಆರಾಮ ವಲಯದಿಂದ ಹೊರಬಂದಾಗ ಸಾಧನೆ, ಬೆಳವಣಿಗೆ ಸಾಧ್ಯವಾಗುತ್ತದೆ. ಆಗ ಅದ್ಭುತವಾದ ಜೀವನ ನಿರ್ಮಾಣವಾಗುತ್ತದೆ ಎಂದರು.
ದಿಕ್ಸೂಚಿ ಮಾತುಗಳನ್ನಾಡಿದ ಮಲ್ಪೆ ರಾಜ್ ಫಿಶ್ ಮೀಲ್, ಆಯಿಲ್ ಕಂಪೆನಿಯ ಆಡಳಿತ ನಿರ್ದೇಶಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದೇಶದ ಸಂಸ್ಕೃತಿ, ಸಂಸ್ಕಾರ, ಪ್ರಾಮಾಣಿಕತೆಯಿಂದ ಬದುಕು ಹಸನಾಗಬಲ್ಲುದು. ಭವಿಷ್ಯದ ಗರ್ಭದಲ್ಲಿ ಯಾರು ಏನಾಗುತ್ತಾರೋ ಎಂಬುದು ಗೊತ್ತಿಲ್ಲ. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್‌ನ ಚಟುವಟಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ವೇದಿಕೆಯಲ್ಲಿ ಬ್ರಹ್ಮಾವರ ಹೋಟೆಲ್ ಆಶ್ರಯದ ಆಡಳಿತ ನಿರ್ದೇಶಕ ಬಿ. ರಾಜಾರಾಮ್ ಶೆಟ್ಟಿ, ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮಣಿಪಾಲದ ಉಪ ಪ್ರಾಂಶುಪಾಲ ಪ್ರೊ. ಶರತ್ ಎಸ್. ಆಳ್ವ, ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ರಂಜಿನಿ ಹೆಗ್ಡೆ ಬೆಳ್ಳೆ, ದಿವಾಕರ ಶೆಟ್ಟಿ, ಮೈಸ್ ಕಂಪ್ಯೂಟರ್ ತರಬೇತುದಾರ ವಿಷ್ಣುಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ, ಟ್ರಸ್ಟ್‌ನ ಕೋಶಾಧಿಕಾರಿ ವಿಜಿತ್ ಶೆಟ್ಟಿ ವಂದಿಸಿದರು. ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ಕಾರ್ಯಕ್ರಮ ನಿರ್ದೇಶಕಿ ಪ್ರೊ. ದಿವ್ಯಾರಾಣಿ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.