ಖ್ಯಾತ ಭಾಗವತ ಹೆಜಮಾಡಿ ಹರಿಯಪ್ಪ ಶೆಣೈ ನಿಧನ (Yakshgana Bhagavaţh Hejmadi Hariyappa Shenoy passes away)
ಖ್ಯಾತ ಭಾಗವತ ಹೆಜಮಾಡಿ ಹರಿಯಪ್ಪ ಶೆಣೈ ನಿಧನ
(Hejamady) ಹೆಜಮಾಡಿ: ಹೆಜಮಾಡಿ ಗುಂಡಿ ನಿವಾಸಿ ಹೆಜಮಾಡಿ ಹರಿಯಪ್ಪ ಶೆಣೈ (70) ಸೋಮವಾರ ಬೆಳಿಗ್ಗೆ ನಿಧನರಾದರು.
ಗುಂಡಿ ಪ್ರಭಾಕರ್ ಶೆಣೈ ಇವರ ಸುಪುತ್ರರಾದ ಇವರು, ಹವ್ಯಾಸಿ ಯಕ್ಷಗಾನ ಭಾಗವತ ರಾಗಿದ್ದು, ಸುರತ್ಕಲ್ ಮೇಳದಲ್ಲಿ 2 ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಹವ್ಯಾಸಿ ಮೇಳಗಳಲ್ಲಿ ಭಾಗವತಿಕೆ ಮಾಡುತ್ತಿದ್ದ ಇವರು, ಮಂಗಳೂರು ಆಕಾಶವಾಣಿ ಕಲಾವಿದರಾಗಿದ್ದರು.
ಹರಿಯಪ್ಪ ಶೆಣೈ ಹೆಜಮಾಡಿ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಆಗಿದ್ದು, ಕ್ರೀಡೆ, ಪಂದ್ಯಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. ಇವರು ತನ್ನ ಹಾಸ್ಯ ಪ್ರವೃತ್ತಿ ಮತ್ತು ಸಾಮಾಜಿಕ ಗುಣಗಳಿಂದ ಜನ ಪ್ರೀತಿ ಗಳಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.