# Tags
#ರಾಜಕೀಯ

ದೆಹಲಿ ಮುಂದಿನ ಸಿಎಂ ಆಗಿ ಎಎಪಿ ನಾಯಕಿ ಆತಿಶಿ ಆಯ್ಕೆ

ಅರವಿಂದ್ ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕೆಲವೇ ಗಂಟೆಗಳ ನಂತರ, ಎಎಪಿ ನಾಯಕಿ ಅತಿಶಿ ಅವರು ಕೇಜ್ರಿವಾಲ್ ಮಾರ್ಗದರ್ಶನದಲ್ಲಿ ಸರ್ಕಾರವನ್ನು ನಡೆಸುವುದಾಗಿ ಮಂಗಳವಾರ ಹೇಳಿದ್ದಾರೆ.
ಇಷ್ಟು “ದೊಡ್ಡ ಜವಾಬ್ದಾರಿ”ಯನ್ನು ತನಗೆ ನೀಡಿ ತನ್ನ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಕ್ಕೆ ನಂಬಿದ್ದಕ್ಕಾಗಿ ಕೇಜ್ರಿವಾಲ್ ಅವರಿಗೆ ಆತಿಶಿ ಧನ್ಯವಾದ ಅರ್ಪಿಸಿದ್ದಾರೆ.
ದೆಹಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅತಿಶಿ, “ದೆಹಲಿಯಲ್ಲಿ ಒಬ್ಬರೇ ಸಿಎಂ ಇದ್ದಾರೆ ಮತ್ತು ಅವರು ಅರವಿಂದ್ ಕೇಜ್ರಿವಾಲ್. ಅವರನ್ನು ಮತ್ತೆ ಸಿಎಂ ಮಾಡುವುದು ನಮ್ಮ ಏಕೈಕ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.
ನನಗೆ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ದೆಹಲಿಯ ಪ್ರೀತಿಯ ಮುಖ್ಯಮಂತ್ರಿ ಮತ್ತು ನನ್ನ ಗುರು ಅರವಿಂದ್ ಕೇಜ್ರಿವಾಲ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನೊಬ್ಬ ಸಾಮಾನ್ಯ ರಾಜಕಾರಣಿ ಮತ್ತು ನಾನು ಬೇರೆ ಯಾವುದೇ ಪಕ್ಷದಲ್ಲಿದ್ದರೆ ನನಗೆ ಟಿಕೆಟ್ ಸಿಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಕೇಜ್ರಿವಾಲ್ ಅವರು ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ. ನಾನು ನನ್ನ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆ” ಎಂದು 43 ವರ್ಷದ ಹಿರಿಯ ಎಎಪಿ ನಾಯಕಿ ಹೇಳಿದ್ದಾರೆ.

ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಿಜೆಪಿ ಸಂಚು ರೂಪಿಸಿದ್ದು, ಕೇಜ್ರಿವಾಲ್ ಅವರನ್ನು ಆರು ತಿಂಗಳ ಕಾಲ ಜೈಲಿನಲ್ಲಿ ಇರಿಸಿದೆ ಎಂದು ಅವರು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ ಅವರಿಗೆ ಈಗ ಜಾಮೀನು ನೀಡಿದ್ದು, ಜೊತೆಗೆ ತನಿಖಾ ಸಂಸ್ಥೆಯನ್ನು ಪಂಜರದ ಗಿಳಿ ಎಂದು ಕರೆಯುವ ಮೂಲಕ ಕೇಂದ್ರಕ್ಕೆ ಕಪಾಳಮೋಕ್ಷ ಮಾಡಿದೆ ಎಂದು ಹೇಳಿದ್ದಾರೆ.

“ಜೈಲಿನಿಂದ ಹೊರಬಂದ ನಂತರ ಅರವಿಂದ್ ಕೇಜ್ರಿವಾಲ್ ಮಾಡಿದ್ದನ್ನು ಜಗತ್ತಿನಲ್ಲಿ ಯಾರೂ ಮಾಡಿಲ್ಲ ಅಥವಾ ವಿಶ್ವದ ಯಾವುದೇ ನಾಯಕರು ಮಾಡಿಲ್ಲ. ಅವರ ಪ್ರಾಮಾಣಿಕತೆಯನ್ನು ದೆಹಲಿಯ ಜನರು ಪ್ರಮಾಣೀಕರಿಸಿದ ನಂತರವೇ ಅವರು ಸಿಎಂ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಅತಿಶಿ ಹೇಳಿದ್ದಾರೆ.
ಇಂದು, ದೆಹಲಿಯ ಜನರು ಬಿಜೆಪಿಯ ಪಿತೂರಿಯಿಂದ ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಕೋಪಗೊಂಡಿದ್ದಾರೆ. ಜನರು ಕೇಜ್ರಿವಾಲ್ ಅವರಂತಹ ಪ್ರಾಮಾಣಿಕ ನಾಯಕರನ್ನು ಮಾತ್ರ ತಮ್ಮ ಸಿಎಂ ಎಂದು ಬಯಸುತ್ತಾರೆ. ಏಕೆಂದರೆ ಅವರು ಸಿಎಂ ಮಾತ್ರ ಆಗಿರುವುದಿಲ್ಲ ಎಂದು ಅವರಿಗೆ ತಿಳಿದಿದೆ.ಎಂದು ಆತಿಶಿ ಹೇಳಿದ್ದಾರೆ.
ಶಿಕ್ಷಣ, ಹಣಕಾಸು, ಕಾನೂನು, ಪ್ರವಾಸೋದ್ಯಮ ಮತ್ತು ಇತರ ಹಲವಾರು ಇಲಾಖೆಗಳ ಖಾತೆಯನ್ನು ಹೊಂದಿರುವ ಆತಿಶಿ ಅವರು, ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಾರೆ. ಆದ್ದರಿಂದ ಇದು ಸಂತೋಷದಾಯಕ ವಿಷಯಲ್ಲ. ಹಾಗಾಗಿ ನನಗೆ ಹಾರ ಹಾಕಿ ಸಂಭ್ರಮಿಸಬೇಡಿ ಎಂದು ಜನರನ್ನು ಕೇಳಿಕೊಂಡಿದ್ದಾರೆ.
ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಅತಿಶಿ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರನ್ನು ಬುಧವಾರ ಭೇಟಿಯಾಗುವ ಸಾಧ್ಯತೆಯಿದೆ. ಕೇಜ್ರಿವಾಲ್ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಲು ಸಂಜೆ 4.30 ಕ್ಕೆ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರನ್ನು ಭೇಟಿಯಾಗಲಿದ್ದಾರೆ. ಹೊಸ ಮುಖ್ಯಮಂತ್ರಿಯ ಪ್ರಸ್ತಾಪವನ್ನು ಸಕ್ಸೇನಾ ಅವರಿಗೆ ಕಳುಹಿಸಿದ ನಂತರ, ಅವರು ಅದನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ರವಾನಿಸುತ್ತಾರೆ. ನಂತರ ಅತಿಶಿ ಅವರು ದೆಹಲಿ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2