ಪಂಚವರ್ಣದ ಪ್ರತಿಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಉಪಹಾರ ವ್ಯವಸ್ಥೆಗೆ ಚಾಲನೆ (Kota Panchavarna)
ಪಂಚವರ್ಣದ ಪ್ರತಿಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಉಪಹಾರ ವ್ಯವಸ್ಥೆಗೆ ಚಾಲನೆ
(Kota) ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿ ಭಾನುವಾರ ಹಮ್ಮಿಕೊಳ್ಳುವ ಪರಿಸರಸ್ನೇಹಿ ಅಭಿಯಾನಕ್ಕೆ ಪ್ರತೀ ಭಾನುವಾರ ಸ್ವಯಂ ಸೇವಕರಿಗೆ ಉಪಹಾರದ ವ್ಯವಸ್ಥೆಗೆ ಭಾನುವಾರ ಶ್ರೀ ಚಿತ್ತಾರಿ ಟ್ರಸ್ಟ್ ಚಾಲನೆ ನೀಡಿತು.
ಶ್ರೀ ಚಿತ್ತಾರಿ ಟ್ರಸ್ಟ್ ಮುಖ್ಯಸ್ಥರಾದ ಗೋಪಾಲ ಪೈ ಉಪಹಾರ ನೀಡುವುದರ ಮೂಲಕ ಚಾಲನೆ ನೀಡಿದರು.
203 ನೇ ಭಾನುವಾರದ ಸೇವಾಕಾರ್ಯದ ನಿಮಿತ್ತ ಕೋಟದ ಬಡ ಕುಟುಂಬವಾದ ಪರಿಶಿಷ್ಟ ಜಾತಿಪಂಗಡದ ಗೌರಿ ಹಾಡಿಕೆರೆ ಇವರಿಗೆ ನೂತನ ಗೃಹ ನಿರ್ಮಾಣಕ್ಕೆ ಸಾಮಾಜಿಕ ಕಾರ್ಯಕರ್ತ ಜಯರಾಜ್ ಸಾಲಿಯಾನ್ ಮತ್ತವರ ತಂಡ ಸಿದ್ಧರಾಗಿದ್ದು, ಹಳೆ ಮನೆ ಅಳಿಯುವ ಕಾರ್ಯವನ್ನು ಪಂಚವರ್ಣ ಸಂಸ್ಥೆ ಭಾನುವಾರ ಹಮ್ಮಿಕೊಂಡಿತು.
ಸಾಮಾಜಿಕ ಕಾರ್ಯಕರ್ತ ಜಯರಾಜ್ ಸಾಲಿಯಾನ್, ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಸ್ಥಾಪಾಕಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ಪ್ರದಾನ ಕಾರ್ಯದರ್ಶಿ ವಸಂತಿ ಹಂದಟ್ಟು, ಮಣೂರು ಫ್ರೆಂಡ್ಸ್ ಪೂರ್ವಾಧ್ಯಕ್ಷ ದಿನೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.