ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ಕೆಸರ್ದ ಕಂಡದ ಗೊಬ್ಬುಲು ಕಾರ್ಯಕ್ರಮ (“Aatidonji kesarda kandada gobbulu” by Padubidri Congress Party)
ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ಕೆಸರ್ದ ಕಂಡದ ಗೊಬ್ಬುಲು ಕಾರ್ಯಕ್ರಮ
PHOTO CREDIT : RAVI DIGITALS PADUBIDRI
(Padubidri) ಪಡುಬಿದ್ರಿ : ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಇಂದಿನ ಜನಾಂಗ ಕೃಷಿಗೆ ಒತ್ತು ನೀಡದ ಕಾರಣ ಕೃಷಿ ನಾಶದ ಅಂಚಿಗೆ ಸಾಗುತ್ತಿದೆ. ಕೃಷಿಯಿಂದ ನಮ್ಮ ಹಿರಿಯರು ಆರೋಗ್ಯಕರ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಇಂದು ಅತೀ ವೇಗದ ಆಧುನಿಕ ಬದುಕಿಗೆ ಒಗ್ಗಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಇದರಿಂದ ಆರೋಗ್ಯಕರ ಭೂಮಿ ತಾಯಿಯ ಮಣ್ಣಿನಿಂದ ದೂರ ಸರಿಯುವಂತಾಗಿದೆ. ಸಂಬಂಧಗಳು ಕಳೆದು ಕೊಳ್ಳುವಂತಾಗಿದೆ. ಆದ್ದರಿಂದ ಯುವ ಪೀಳಿಗೆ ಕೃಷಿ ಬದುಕಿನತ್ತ ಒಲುವು ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪಡುಬಿದ್ರಿ ಬ್ರಹ್ಮಸ್ಥಾನದ ಬಳಿಯ ಗದ್ದೆಯಲ್ಲಿ ನಡೆದ ಆಟಿಡೊಂಜಿ ಕೆಸರ್ದ ಕಂಡದ ಗೊಬ್ಬುಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸನ್ಮಾನ/ಬಹುಮಾನ ವಿತರಣೆ : ದೈವ ನರ್ತಕ ಭಾಸ್ಕರ್ ಬಂಗೇರ, ಹಿರಿಯ ರಾಜಕೀಯ ಮುತ್ಸದ್ಧಿ ಸಂಜೀವಿ ಪೂಜಾರ್ತಿ, ಸೀಸನ್ ಬಾಲ್ ಕ್ರಿಕೆಟ್ ಪಟು ಅಂಕಿತ್ ಪೂಜಾರಿ, ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯದಲ್ಲಿಯೇ 5 ನೇ ರ‍್ಯಾಂಕ್ ಪಡೆದ ಚಿನ್ಮಯಿ ಪೈ, ಆಶಾ ಕಾರ್ಯಕರ್ತೆ ರಜನಿ ದೇವಾಡಿಗ, ಬಿ.ಎಲ್ಓ ಸುನೀತಾರವರನ್ನು ಸನ್ಮಾನಿಸಲಾಯಿತು.
ಕೆಸರು ಗದ್ದೆಯಲ್ಲಿ ವಿವಿದ ಅಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಹಗ್ಗ – ಜಗ್ಗಾಟ ಪುರುಷ ವಿಭಾಗದಲ್ಲಿ ಕೋಸ್ಟಲ್ ಎ ತಂಡ ಪ್ರಥಮ ಸ್ಥಾನವನ್ನು ಮತ್ತು ಕೋಸ್ಟಲ್ ಬಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಮಹಿಳಾ ವಿಭಾಗದಲ್ಲಿ ಕುಂಜಾರಮ್ಮ ಕುರ್ಕಾಲು ತಂಡ ಪ್ರಥಮ ಸ್ಥಾನವನ್ನು ಮತ್ತು ಖಡ್ಗೇಶ್ವರಿ ಪಡುಬಿದ್ರಿ ತಂಡ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿತು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಮಾಜಿ ತಾ.ಪಂ.ಸದಸ್ಯ ನವೀನಚಂದ್ರ ಜೆ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ನವೀನ್ ಎನ್. ಶೆಟ್ಟಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಕಾಡಿಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಕಾಪು ತಾಲೂಕು ಅಂಬೇಡ್ಕರ್ ಯುವ ಸೇನಾ ಸಮಿತಿ ಗೌರವಾಧ್ಯಕ್ಷ ಪಿ.ಕೃಷ್ಣ ಬಂಗೇರ, ಸುಚರಿತ ಎಲ್ ಅಮೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಅಚಾರ್ಯ, ಹೆಜಮಾಡಿ ಗ್ರಾ.ಪಂ.ಸದಸ್ಯೆ ನಿರ್ಮಲಾ ಕೆ., ರೋಟರಿ ಅಧ್ಯಕ್ಷೆ ತಸ್ನೀನ್ ಅರ್ಹಾ, ಪಡುಬಿದ್ರಿ ಗ್ರಾ.ಪಂ.ಸದಸ್ಯರಾದ ಜ್ಯೋತಿ ಮೆನನ್, ಗುಲಾಬಿ, ಮುಭೀನಾ ಬೇಗಮ್, ಮಹಮ್ಮದ್ ನಿಯಾಜ್, ಎಮ್ ಎಸ್ ಶಾಫಿ, ಸುನಂದಾ ಸಾಲ್ಯಾನ್, ಶೇಖರ್ ಸಾಲ್ಯಾನ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ , ವಕ್ಫ್ ಬೋರ್ಡ್ ಮಾಜಿ ಸದಸ್ಯ ಗುಲಾಂ ಅಹಮ್ಮದ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಲ್ಫಿ ಡಿ ಕೋಸ್ತಾ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಜಾನಪದ ವಿದ್ವಾಂಸ ಪಿ.ಕೆ ಸದಾನಂದ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಚರಿತಾ ಅಮೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಅಚಾರ್ಯ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ ಉಪಸ್ಥಿತರಿದ್ದರು.
ಸುರೇಶ್ ಎರ್ಮಾಳ್ ತೀರ್ಪುಗಾರರಾಗಿ ಸಹಕರಿಸಿದ್ದರು. ಗಣೇಶ್ ಕೋಟ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಜೇಶ್ ಶೇರಿಗಾರ್ ನಿರೂಪಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು