ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ನವೀಕರಣದ ಪೂರ್ವಭಾವೀ `ಮುಷ್ಟಿ ಕಾಣಿಕೆ'(Padubidri Mahalingeshwara Maha Ganapathi Temple Mushti Kanike)
ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ ನವೀಕರಣದ ಪೂರ್ವಭಾವೀ `ಮುಷ್ಟಿ ಕಾಣಿಕೆ’
ಪಡುಬಿದ್ರಿ: ಜ. 29: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನವೀಕರಣದ ಸಂಕಲ್ಪದೊಂದಿಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ವೇ| ಮೂ| ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಮುಷ್ಟಿ ಕಾಣಿಕೆ ಸಮರ್ಪಣಾ ವಿಧಿ ವಿಧಾನಗಳು ಸಾಂಗವಾಗಿ ನೆರವೇರಿದವು.
ಬೆಳಿಗ್ಗೆ ರುದ್ರ ಪಾರಾಯಣ ಸಹಿತ ಏಕಾದಶ ರುದ್ರಾಭಿಷೇಕ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ನವಕ ಕಲಶಾಭಿಷೇಕಗಳು, ವಿಶೇಷ ನೈವೇದ್ಯ ಸಮರ್ಪಣೆಯೂ ನಡೆಯಿತು.
ಪುಣ್ಯ ಸಂಚಯದ ಮೂಲಕ, ಶ್ರೀ ದೇವಸ್ಥಾನದ ಜೀರ್ಣೊದ್ಧಾರ ಸಂಕಲ್ಪದೊಂದಿಗೆ ಅಗಣಿತ ಗುಣಗಳ ಖಣಿಯಾಗಿರುವ ಮಹಾರುದ್ರನ ಅನುಗ್ರಹ ಪ್ರಾಪ್ತಿಗಾಗಿ ದೇವ ಸನ್ನಿಧಿಯಲ್ಲಿ ಕರ್ಮಾಂಗ ಸಾಂಗತಾ ಸಿದ್ಧಿಗಾಗಿ ವೇ| ಮೂ| ಶಿವರಾಜ ಉಪಾಧ್ಯಾಯ ಅವರ ಪ್ರಾರ್ಥನೆಯ ಬಳಿಕ ನೆರೆದಿದ್ದ ಗ್ರಾಮ ಸೀಮೆಯವರಿಂದ ಮುಷ್ಟಿ ಕಾಣಿಕೆಗಳು ಅರ್ಪಣೆಯಾದವು.
ಈ ಸಂದರ್ಭ ಶ್ರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪೇಟೆಮನೆ ಭವಾನಿಶಂಕರ ಹೆಗ್ಡೆ, ವೇ| ಮೂ| ಶ್ರೀನಿವಾಸ ಉಪಾಧ್ಯಾಯ ವೇ| ಮೂ| ಸುರೇಂದ್ರ ಉಪಾಧ್ಯಾಯ, ಅರ್ಚಕರಾದ ವೈ. ಗುರುರಾಜ ಭಟ್, ಪದ್ಮನಾಭ ಭಟ್ ಎಚ್., ಗಣಪತಿ ಭಟ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ಹಾಗೂ ಸದಸ್ಯರು, ವಿವಿಧ ಗುತ್ತು ಬರ್ಕೆಗಳ ಪ್ರಮುಖರು, ಶ್ರೀ ದೇವಸ್ಥಾನದ ಸಿಬಂದಿ ವರ್ಗ, ವೈ. ಎನ್. ರಾಮಚಂದ್ರ ರಾವ್, ವೈ. ಸುರೇಶ್ ರಾವ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಅಡ್ವೆ ಅರಂತಡೆ ಲಕ್ಷ್ಮಣ ಶೆಟ್ಟಿವಾಲ್, ಎರ್ಮಾಳು ಉದಯ ಕೆ. ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಅಶೋಕ್ ಸಾಲ್ಯಾನ್, ಸುಕುಮಾರ ಶ್ರೀಯಾನ್, ಸದಾಶಿವ ಪಡುಬಿದ್ರಿ, ಪ್ರಕಾಶ್ ದೇವಾಡಿಗ, ರಾಜ ದೇವಾಡಿಗ, ವೈ. ಸುಕುಮಾರ್, ಶೀನ ಪೂಜಾರಿ ಕನ್ನಂಗಾರ್, ಪ್ರಶಾಂತ್ ಶೆಣೈ ಸಹಿತ ಭಕ್ತ ಗಡಣವು ನೆರೆದಿತ್ತು.