ಪಡುಬಿದ್ರಿ: ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅ. 27ರಂದು ಉಭಯ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ (Padubidri ; On behalf of Raagrang Cultural & Sports Club on 27th both district level Goodudeepa Copetition)
ಪಡುಬಿದ್ರಿ: ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅ. 27ರಂದು ಉಭಯ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ
(Padubidri) ಪಡುಬಿದ್ರಿ, ಅ : 25 ಪಡುಬಿದ್ರಿ ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಉಭಯ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆಯನ್ನು ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಅ. 27ರ ಅದಿತ್ಯವಾರ ಸಂಜೆ 6:00 ಗಂಟೆಗೆ ಅಯೋಜಿಸಲಾಗಿದೆ ಎಂದು ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಹೇಳಿದ್ದಾರೆ.
ಅವರು ಶುಕ್ರವಾರ ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾಂಪ್ರದಾಯಿಕ ಮತ್ತು ಅಧುನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗದ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
ಭಾಗವಹಿಸಿದ ಪ್ರತಿ ಸ್ಪರ್ಧಾಳುಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುವುದು.
ಉಡುಪಿ ಮತ್ತು ದ.ಕ ಜಿಲ್ಲೆಯ ವಿವಿಧ ಗ್ರಾಮಗಳಿಂದ ಗೂಡುದೀಪ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಡುಬಿದ್ರಿ ಓಂಕಾರ್ ಕಲಾ ಸಂಗಮ ಮತ್ತು ಸುಪ್ರೀತಾ ಮತ್ತು ಶ್ವೇತಾ ಟೀಮ್ ಪಾಂಗಾಳ ತಂಡದವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾರತೀಯ ರಕ್ಷಣಾ ಸೇನೆಯ ನೌಕಾಪಡೆಯಲ್ಲಿ 39 ವರ್ಷಗಳ ಕಾಲ ನಿಯಂತ್ರಣ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಟರಾಜ್ ಪಿ.ಎಸ್ ಪಡುಬಿದ್ರಿಯವರನ್ನು ಸನ್ಮಾನಿಸಲಾಗುವುದು.
ಗೂಡು ದೀಪ ಸ್ಪರ್ಧೆಯ ತೀರ್ಪುಗಾರರಾಗಿ, ರೋಹಿತ್ ಕುಮಾರ್ ಪಜಿರ್, ಮನೋಜ್ ಕನಪಾಡಿ ಮತ್ತು ರಮಾಂಜಿ ಉಡುಪಿ ಭಾಗವಹಿಸಲಿದ್ದಾರೆ.
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಉದ್ಯಮಿ ಡಿ.ಅರ್ ರಾಜು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ಸಂಸ್ಥೆಯ ಅಧ್ಯಕ್ಷ ವಿಶ್ವಾಸ್ ಅಮೀನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನವೀನಚಂದ್ರ ಜೆ. ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಗುಲಾಂ ಮೊಹಮ್ಮದ್, ವೈ ಸುಧೀರ್ ಕುಮಾರ್, ನಟರಾಜ್ ಪಿ. ಎಸ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವೈ. ಸುಕುಮಾರ್, ದಿನೇಶ್ ಪಲಿಮಾರು, ಗೀತಾ ಅರುಣ್, ನವೀನ್ ಎನ್ ಶೆಟ್ಟಿ, ರಮೀಜ್ ಹುಸೇನ್, ಎಮ್.ಎಸ್ ಶಾಫಿ, ಸುನಿಲ್ ಕುಮಾರ್, ನಮೃತಾ ಮಹೇಶ್, ರಚನ್ ಸಾಲ್ಯಾನ್, ನವೀನ್ ಸಾಲ್ಯಾನ್ ಪೆರ್ಡೂರು, ಗಣೇಶ್ ಕೋಟ್ಯಾನ್, ರಾಜೇಶ್ವರಿ ಅವಿನಾಶ್, ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್, ಉಪಾಧ್ಯಕ್ಷ ಶಶಿ ಪಡುಬಿದ್ರಿ, ಕಾರ್ಯಕ್ರಮ ಸಂಯೋಜಕ ಸಂತೋಷ್ ಪಡುಬಿದ್ರಿ, ಕಾರ್ಯದರ್ಶಿ ಶೋಭಾ ಚಂದ್ರಶೇಖರ್ ಉಪಸ್ಥಿತರಿದ್ದರು.