ಪುತ್ತೂರು ; ಮಹಿಳೆಗೆ ಮದ್ಯನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ, ಆರೋಪಿಯ ಬಂಧನ (Putturu Rape case: Accuse Arrest)
ಪುತ್ತೂರು ; ಮಹಿಳೆಗೆ ಮದ್ಯನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ, ಆರೋಪಿಯ ಬಂಧನ
(Putturu) ಪುತ್ತೂರು: ಹಾಸನ ತಾಲೂಕಿನ ಚೆನ್ನರಾಯಪಟ್ಟಣದ ಮಹಿಳೆಯೊಬ್ಬರು ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿದ್ದ ವೇಳೆ ಆಕೆಗೆ ಸೇವಿಸಲು ಮದ್ಯ ನೀಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಆರೋಪಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಪುತ್ತೂರು ತಾಲ್ಲೂಕಿನ ಆರ್ಯಾಪು ನಿವಾಸಿಯಾಗಿದ್ದು, ಪ್ರಸ್ತುತ ನಗರದ ಹೊರವಲಯದ ಬನ್ನೂರು ಗ್ರಾಮದಲ್ಲಿ ವಾಸ್ತವ್ಯವಿರುವ ಸಂಶುದ್ದೀನ್ ಆಸ್ಗರ್ ಆಲಿ(23) ಬಂಧಿತ ಆರೋಪಿ.
ಆರ್ಯಾಪು ಗ್ರಾಮದ ಸಂಪ್ಯ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕೆಯಾಗಿ ದುಡಿಯುತ್ತಿದ್ದ ಚೆನ್ನರಾಯಪಟ್ಟಣದ ಸಂತ್ರಸ್ತೆ ಮಹಿಳೆ ಕಳೆದ ನ. ೨೪ರಂದು ರಾತ್ರಿ ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆಕೆಗೆ ಸೇವಿಸಲು ಮದ್ಯ ನೀಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ ಎಂಬ ಆರೋಪಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು (Putturu Police Station)) ಆರೋಪಿ ಸಂಶುದ್ದೀನ್ ಆಸ್ಗರ್ ಆಲಿಯನ್ನು ಮಂಗಳವಾರ ಸಂಜೆ ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಪತ್ತೆ ಮಾಡಿ ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.