ಫೆ. 3ರಂದು ಡ್ಯಾನ್ಸ್ ಪಡುಬಿದ್ರಿ ಡ್ಯಾನ್ಸ್ – 2024 (Feb. 3: Dance Padubidri Dance 2024)
ಫೆ. 3ರಂದು ಡ್ಯಾನ್ಸ್ ಪಡುಬಿದ್ರಿ ಡ್ಯಾನ್ಸ್ – 2024
(Padubidri) ಪಡುಬಿದ್ರಿ: ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಓಂಕಾರ ಕಾಸ್ಟಮ್ ಮತ್ತು ಕಲಾ ಸಂಗಮದ ವತಿಯಿಂದ ಫೆ. 3ರಂದು ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ ಸಮೂಹ ಫಿಲ್ಮೀ ನೃತ್ಯ ಸ್ಪರ್ಧೆ “ಡ್ಯಾನ್ಸ್ ಪಡುಬಿದ್ರಿ ಡ್ಯಾನ್ಸ್-2024” ಆಯೋಸಲಾಗಿದೆ.
ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಬೆಂಗಳೂರು, ಹಾಸನ, ಬಾಗಲಕೋಟೆ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಮಂಗಳೂರು ಭಾಗಗಳಿಂದ ಸುಮಾರು 30 ಪ್ರಸಿದ್ದ ನೃತ್ಯ ತಂಡಗಳು ಹಾಗೂ ಜತೆಗೆ ಸ್ಥಳೀಯ ನೃತ್ಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ.
ಗಣ್ಯರ ಉಪಸ್ಥಿತಿಯಲ್ಲಿ ಉಡುಪಿಯ ಉಜ್ವಲ ಗ್ರೂಪ್‌ನ ಅಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಸ್ಪರ್ಧೆ ಉದ್ಘಾಟಿಸಲಿದ್ದಾರೆ ಎಂದರು.
ವಿಶೇಷ ಅತಿಥಿಗಳಾಗಿ ಕಿರುತೆರೆ ಹಾಗು ಚಲನಚಿತ್ರ ನಟ ನಟಿಯರಾದ ಸಾಯಿಕೃಷ್ಣಕುಡ್ಲ, ವಿನೀತ್ ಕುಮಾರ್, ನಿರೀಕ್ಷಾ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿ ಶಿವಾನಿ ನವೀನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ವಂದನಾ ರೈ ಭಾಗವಹಿಸಲಿದ್ದಾರೆ.
ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಫಲಕ ಸಹಿತ ಪ್ರಥಮ ನಗದು 30 ಸಾವಿರ ರೂ., ದ್ವಿತೀಯ 20 ಸಾವಿರ ರೂ. ಮತ್ತು ತೃತೀಯ 10 ಸಾವಿರ ರೂ. ನೀಡಲಾಗು ವುದು ಎಂದರು.
ಇದೇ ಸಂದರ್ಭ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೆ ಓಂಕಾರ ಕಲಾ ಸಂಗಮದ ವಿದ್ಯಾರ್ಥಿ ಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಓಂಕಾರ್ ಕಾಸ್ಟಮ್ಸ್‌ನ ಗೀತಾ ಅರುಣ್, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಪಿ.ಕೃಷ್ಣ ಬಂಗೇರ, ಕಾರ್ಯದರ್ಶಿ ಪವನ್ ಸಾಲ್ಯಾನ್, ರೋಟರಿ ಸಮುದಾಯ ದಳದ ಅಧ್ಯಕ್ಷ ರಚನ್ ಸಾಲ್ಯಾನ್ ಉಪಸ್ಥಿತರಿದ್ದರು.