# Tags
#ಶಾಲಾ ಕಾಲೇಜು

ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಸರಕಾರಿ ಸಂಯುಕ್ತ ಫ್ರೌಢಶಾಲೆ ಒಳಕಾಡು, ಶ್ರೀ ಅನಂತೇಶ್ವರ ಫ್ರೌಢಶಾಲೆ “ಆರ್ಡಿನೋ” ಕಾರ್ಯಾಗಾರ (Student of SMVITM organized “Ardiunio” workshop at Sri Anantheshwara English Medium High school, Udupi)

ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಸರಕಾರಿ ಸಂಯುಕ್ತ ಫ್ರೌಢಶಾಲೆ ಒಳಕಾಡು, ಶ್ರೀ ಅನಂತೇಶ್ವರ ಫ್ರೌಢಶಾಲೆ “ಆರ್ಡಿನೋ” ಕಾರ್ಯಾಗಾರ

(Bantakal)ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡದಿಂದ ಒಳಕಾಡು ಸರಕಾರಿ ಸಂಯುಕ್ತ ಫ್ರೌಢ ಶಾಲೆ ಮತ್ತು ಶ್ರೀ ಅನಂತೇಶ್ವರ ಫ್ರೌಢಶಾಲೆ, ಉಡುಪಿ ಇಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ನ ವತಿಯಿಂದ “ಆರ್ಡಿನೋ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು   ಆಯೋಜಿಸಲಾಗಿತ್ತು.

ಈ ಕಾರ್ಯಾಗಾರದಲ್ಲಿ ಆರ್ಡಿನೋ ಬೋರ್ಡ್ ಬಳಕೆ, ಆರ್ಡಿನೋ ಪ್ರೋಗ್ರಾಮಿಂಗ್ ಮತ್ತು ಪ್ರಾಜೆಕ್ಟ್ ತಯಾರಿಕೆ ಬಗ್ಗೆ ಹಾಗೂ ಇತರ ಎಲೆಕ್ಟ್ರಾನಿಕ್ ಘಟಕಗಳ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ತೋರಿಸುವುದರ ಮೂಲಕ ತಿಳಿಸಲಾಯಿತು.

ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ ಮತ್ತು ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಆದಿತ್ಯದಾಸ್, ಅತುಲ್ ಭಟ್, ಧನುಷ್ ಎಸ್, ಧ್ರುವ ಪಾಟೀಲ್ ಮತ್ತು ಕಾತ್ಯಾಯಿನಿ ಕಾಮತ್, ಪಂಚಮಿ ಹೆಬ್ಬಾರ್, ಧನುಷ್ ಮತ್ತು ಧನುಷ್ ಕುಮಾರ್ ಇವರ ಎರಡು ತಂಡಗಳಾಗಿ ನಡೆಸಿಕೊಟ್ಟರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2