# Tags
#ಅಪರಾಧ

ಬಂಟ್ವಾಳ: ಕೂಲಿಕಾರ್ಮಿಕೆಯ ಮನೆ ಬೆಂಕಿಗಾಹುತಿ (Bantwala: A laborer’s house caught fire)

ಬಂಟ್ವಾಳ: ಕೂಲಿಕಾರ್ಮಿಕೆಯ ಮನೆ ಬೆಂಕಿಗಾಹುತಿ

(Bantwala) ಬಂಟ್ವಾಳ:  ಆಕಸ್ಮಿಕ ಬೆಂಕಿ ಅವಘಡದಿಂದ
ಕೂಲಿ ಕಾರ್ಮಿಕೆಯೋರ್ವರ ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಿಯನಡುಗೋಡು ಎಂಬಲ್ಲಿ ಶನಿವಾರ ನಡೆದಿದೆ.
ಎಲಿಯನಡುಗೋಡು ಗ್ರಾಮದ ಉಪ್ಪಿರ  ನಿವಾಸಿ ಮೋನಮ್ಮ ಎಂಬವರ ಮನೆಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂ ಮೌಲ್ಯದ ಮನೆ ಸಂಪೂರ್ಣ ಭಸ್ಮವಾಗಿದೆ.
ಮೋನಮ್ಮ‌ಅವರು ತನ್ನಿಬ್ಬರು ಮಕ್ಕಳೊಂದಿಗೆ ಶುಕ್ರವಾರ ರಾತ್ರಿ  ಗ್ರಾಮದ ದೇವಸ್ಥಾನವಾದ ಪೂಂಜಾ ದೇವಳದಲ್ಲಿ ನಡೆಯುತ್ತಿದ್ದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದರು. ದೇವಳದಿಂದ ವಾಪಸು ಮನೆಗೆ ಬಂದಾಗ ಮನೆಯನ್ನು ಸಂಪೂರ್ಣ ಬೆಂಕಿ ಅವರಿಸಿತ್ತು. ರಾತ್ರಿ ವೇಳೆ ಮನೆಯೊಳಗಿಂದ ಕಾಣಿಸಿಕೊಂಡ ಹೊಗೆಯನ್ನು ಗಮನಿಸಿದ್ದ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಅದಾಗಲೇ ಬೆಂಕಿ ಮನೆಯನ್ನು ಆವರಿಸಿಕೊಂಡಿತ್ತು.
  ಮೋನಮ್ಮ ಅವರು ಬಡ ಕುಟುಂಬದ ಮಹಿಳೆಯಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ತಗಡುಶೀಟಿನ ಮನೆಯಲ್ಲಿ ‌ವಾಸವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಒರ್ವಾಕೆ ಡಿಗ್ರಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಇನ್ನೊಬ್ಬಳು ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.
ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಪರಿಣಾಮ ಮನೆಯೊಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಟಿಹೋಗಿದೆ.  ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯ ಪರೀಕ್ಷೆಯ ಪ್ರವೇಶ ಪತ್ರ ಕೂಡ ಬೆಂಕಿಗೆ ಭಸ್ಮವಾಗಿದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಸದಸ್ಯೆ ಶೋಭಾ, ಪಿಡಿಒ ಪದ್ಮನಾಭ ನಾಯ್ಕ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕರ ಭೇಟಿ:
ಈ ಘಟನೆಯ ಬಗ್ಗೆ ಮಾಹಿತಿ ಪಡೆದ   ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು (Rajesh Naik Ulipadi) ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಕುಕ್ಕಿಪ್ಪಾಡಿ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರ್, ಪಂಚಾಯತ್ ಸದಸ್ಯರಾದ ಗೀತಾ, ಶೋಭಾ, ಬಿಜೆಪಿ ಬೂತ್ ಅಧ್ಯಕ್ಷರಾದ ಅಮ್ಮು ನಡ್ಯೋಡಿ, ಪುರುಷೋತ್ತಮ ಶೆಟ್ಟಿ ವಾಮದಪದವು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. 

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2