# Tags
#ಅಪರಾಧ

ಬಿಜಾಪುರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಲ್ಕಿಯಲ್ಲಿ ಮೊಬೈಲ್ ಟವರ್ ಏರಿ ಹೈಡ್ರಾಮ ಮಾಡಿದ ಯುವಕ:  

ಬಿಜಾಪುರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಲ್ಕಿಯಲ್ಲಿ ಮೊಬೈಲ್ ಟವರ್ ಏರಿ ಹೈಡ್ರಾಮ ಮಾಡಿದ ಯುವಕ:  

ದ.ಕ \ ಮುಲ್ಕಿ: ಇಲ್ಲಿಗೆ ಸಮೀಪದ ಕೋಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ಸತೀಶ್ ಎಂಬ ಯುವಕ ಮೊಬೈಲ್ ಟವರ್  ಏರಿ, ಪುಕ್ಕಟೆ ಮನರಂಜನೆ ಒದಗಿಸಿ ಹೈಡ್ರಾಮ ಸೃಷ್ಟಿಸಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದು ಕೊನೆಗೆ ಆತನೇ ಮಿತ್ರನ ಮಾತು ಕೇಳಿ ಕೆಳಗೆ ಇಳಿದಿದ್ದಾನೆ.

ಶನಿವಾರ ಬೆಳಗ್ಗೆ ಸುಮಾರು 10:30 ಗಂಟೆಗೆ ಯುವಕ ಸತೀಶ್ ಸುಮಾರು 100 ಮೀಟರ್ ಎತ್ತರದ ಮೊಬೈಲ್ ಟವರ್ ಏರಿ ಟವರ್ ನ ತುತ್ತ ತುದಿಗೆ ಹೋಗಿ ವಿವಿಧ ಚೇಷ್ಟೆ ಗಳನ್ನು ಮಾಡುತ್ತಾ ಸ್ಥಳೀಯರನ್ನು ಭಯಭೀತರನ್ನಾಗಿಸಿದ್ದಾನೆ

ಕೂಡಲೇ ಸ್ಥಳೀಯರು ಮುಲ್ಕಿ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮುಲ್ಕಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಭೀಮಾಶಂಕರ್ ಮೂಲಕ ಮೈಕ್ ನಲ್ಲಿ ಆತನಿಗೆ ಸಮಾಧಾನ ಮಾಡಿ ಕೆಳಗೆ ಬರಲು ಹೇಳಿದ್ದಾರೆ.

ಆದರೆ ಸತೀಶ್ ಯಾರ ಮಾತು ಕೇಳದೆ ಪುನಹ ಟವರ್ ನ ಮೇಲೆ ಹತ್ತಿ ಮತ್ತೆ ಹೈಡ್ರಾಮಾ ಸೃಷ್ಠಿಸಿದ್ದಾನೆ.

ಬಳಿಕ ಸತೀಶ್ ನ ಮಿತ್ರನ ಸಹಕಾರದೊಂದಿಗೆ   ಮೊಬೈಲ್ ಟವರ್ ನಿಂದ ಮಧ್ಯಾಹ್ನ 1-15ಕ್ಕೆ ಟವರ್ ನಿಂದ ಕೆಳಗೆ ಇಳಿದಿದ್ದು ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ.

ಹೈಡ್ರಾಮಾ ಮಾಡಿದ್ದ ಯುವಕ ಸತೀಶ್  ಮೂಲತಃ ವಿಜಯಪುರ ಜಿಲ್ಲೆಯ ಅಲ್ ಮೇಲು ಎಂಬ ಊರಿನ ನಿವಾಸಿಯಾಗಿದ್ದು, ಕೂಲಿ ಕೆಲಸಕ್ಕೆಂದು ಮುಲ್ಕಿಗೆ ಬಂದಿದ್ದ ಎಂದು ಹೇಳಿದ್ದಾನೆ.

ಈತ  ಬೆಳಗಾವಿ ಸಹಿತ ನಾಲ್ಕು ಕಡೆಗಳಲ್ಲಿ ಇದೇ ರೀತಿ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ ಎಂದು ಹೇಳಿಕೊಂಡಿದ್ದಾನೆ.

ಆತನ ಊರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು  ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾನೆ

ಮೊಬೈಲ್ ಟವರ್ ಗೆ ಯಾವುದೇ ರಕ್ಷಣಾ ಬೇಲಿಗಳಿಲ್ಲದೆ ಇರುವುದು ಈ ಅಪಾಯಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವಕ ಸತೀಶ್ ಮೊಬೈಲ್ ಟವರ್ ಗೆ ಹತ್ತುವ ದೃಶ್ಯ ಸ್ಥಳೀಯ ಕಂಪನಿಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಯುವಕ ಒಂದು ವೇಳೆ ಟವರ್‌ನಿಂದ ಕೆಳಗೆ ಬಿದ್ದರೆ, ಕೆಳಗೆ ಇರುವ ಹೈ ಟೆಂಷನ್‌ ತಂತಿ ಮೇಲೆ ಬೀಳುವ ಸಾಧ್ಯತೆ ಇದ್ದುದರಿಂದ ಅದರ ವಿದ್ಯುತ್‌ ಕಡಿಯಗೊಳಿಸಲಾಗಿತ್ತು. ಇದರಿಂದ ಪರಿಸರದ ಔದ್ಯೋಗಿಕ ಕೇಂದ್ರಗಳಿಗೂ ಬಿಸಿ ತಟ್ಟಿತ್ತು.

ಸ್ಥಳದಲ್ಲಿ ಪಣಂಬೂರು ಎಸಿಪಿ ಮನೋಜ್ ಕುಮಾರ್ ಹಾಗೂ ಮುಲ್ಕಿ ಪೊಲೀಸರು ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2