ಮಕ್ಕಳ ಹುಟ್ಟು ಹಬ್ಬದ ಪ್ರಯುಕ್ತ ಉಸಿರಿಗಾಗಿ ಹಸಿರು ಸಂಘಟನೆಗೆ ಪಾಂಗಾಳ ಕೊಟ್ಟಾರಿ ಕುಟುಂಬದಿಂದ ಒಂದು ಸಾವಿರ ಸಸಿ ನೀಡುವ ಭರವಸೆ
ಮಕ್ಕಳ ಹುಟ್ಟು ಹಬ್ಬದ ಪ್ರಯುಕ್ತ ಉಸಿರಿಗಾಗಿ ಹಸಿರು ಸಂಘಟನೆಗೆ ಪಾಂಗಾಳ ಕೊಟ್ಟಾರಿ ಕುಟುಂಬದಿಂದ ಒಂದು ಸಾವಿರ ಸಸಿ ನೀಡುವ ಭರವಸೆ
(Katapadi) ಕಟಪಾಡಿ: ಮಕ್ಕಳ ಹುಟ್ಟು ಹಬ್ಬದಂದು ಬಂದ ಅತಿಥಿಗಳಿಗೆ ಮಕ್ಕಳಿಂದಲೇ ಗಿಡ ಗಳನ್ನು ನೀಡಿ ಹುಟ್ಟಿದ ಹಬ್ಬ ಆಚರಿಸಿದ ದಂಪತಿಗಳು, ಉಸಿರಿಗಾಗಿ ಹಸಿರು ಸಂಘಟನೆಯ ಹಸಿರು ಕ್ರಾಂತಿಗಾಗಿ 1 ಸಾವಿರ ಗಿಡ ಗಳನ್ನು ನೀಡುದಾಗಿ ಭರವಸೆಯನ್ನು ಪಾಂಗಳ ಗುಡ್ಡೆ ಕೊಟ್ಟಾರಿ ಮನೆತನದ ಶ್ರೀಮತಿ ಮತ್ತು ಶ್ರೀ ಸ್ವಾತಿ ರೋಹನ್ ಹೆಗ್ಡೆ ಮತ್ತು ಶ್ರೀಮತಿ ರಿಷಿತಾ ಪ್ರಶಾಂತ್ ಶೆಟ್ಟಿಯವರು ವಾಗ್ದಾನ ನೀಡಿದ್ದಾರೆ.
ಇವರ ಕಂದಮ್ಮಗಳಾದ ಕ್ರಿ ಶವ್ ಹೆಗ್ಡೆ ಮತ್ತು ಪ್ರಿಥ್ವಿ ಶೆಟ್ಟಿ ಇವರ ಪ್ರಥಮ ವರ್ಷ ದ ಹುಟ್ಟಿ ದ ಹಬ್ಬದ ಸಂಭ್ರಮ ವನ್ನು ಆಚರಿದ ಇವರು, ಉಸಿರಿಗಾಗಿ ಹಸಿರು ಸಂಘಟನೆ ಮಾಡುತ್ತಿರುವ ಹಸಿರು ಕಾಂತಿ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರ ವ್ಯಕ್ತ ಪಡಿಸಿ, ಈ ಬಾರಿ 1 ಸಾವಿರ ಗಿಡ ಗಳನ್ನು ನೀಡುದಾಗಿ ಹೇಳಿದರು.
ನಮ್ಮ ಸಂಸ್ಕೃತಿ ಮತ್ತು ಪೃಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಗಮನ ನೀಡಿದಾಗ ಮಾತ್ರ ಮುಂದಿನ ಪೀಳಿಗೆ ನೆಮ್ಮದಿ ಯಿಂದ ಜೀವನ ನಡೆಸಬಹುದು. ಎಲ್ಲರೂ ಸಹಕಾರ ನೀಡಿ ಪ್ರಕೃತಿ ಉಳಿಸಿ ಬೆಳೆಸಿ, ನಾವೆಲ್ಲರೂ ಇನ್ನೊಬ್ಬರಿಗೆ ಮಾದರಿ ಯಾಗೊಣ ಎಂದು ಕೊಟ್ಟಾರಿ ಮನೆತನ ದ ಪರವಾಗಿ ರೋಹನ್ ಹೆಗ್ಡೆ ನುಡಿದರು .
ಉಸಿರಿಗಾಗಿ ಹಸಿರು ಸಂಘಟನೆಯ ಸಂತೋಷ್‌ರವರು ಕೊಟ್ಟಾರಿ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.