# Tags
#ರಾಜಕೀಯ

ಮಾಜಿಮೇಯರ್ ಕವಿತಾ, ಪುರಸಭಾ ಸದಸ್ಯ‌ ಗಂಗಾದರ್ ಬಿಜೆಪಿ ಸೇರ್ಪಡೆ (Ex mangaluru Mayor Kavitha joins BJP)

ಮಾಜಿಮೇಯರ್ ಕವಿತಾ, ಪುರಸಭಾ ಸದಸ್ಯಗಂಗಾದರ್ ಬಿಜೆಪಿ ಸೇರ್ಪಡೆ

(Bantwala) ಬಂಟ್ವಾಳ: ಹಠಾತ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ‌ ಮೇಯರ್ ಕವಿತಾ ಸನೀಲ್ ಅವರು ಶನಿವಾರ ಬಿ.ಸಿ. ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಭಾಭವನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಸೇರ್ಪಡೆಗೊಂಡರು.
 ಇವರೊಂದಿಗೆ ಬಂಟ್ವಾಳ ಪುರಸಭೆಯ‌ ಹಾಲಿ ಸದಸ್ಯ ಗಂಗಾಧರ ಪೂಜಾರಿ ಅವರು ಕೂಡ ಕಾಂಗ್ರೆಸ್ ತೊರೆದು ಬಿಜೆಪಿಯನ್ನು‌ ಸೇರಿದ್ದಾರೆ.
 ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌, ದ.ಕ. ಜಿಲ್ಲಾ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕವಿತಾ ಸನೀಲ್ ಹಾಗೂ ಗಂಗಾಧರ ಪೂಜಾರಿಯವರನ್ನು ಪಕ್ಷದ ಶಾಲು ಹಾಗೂ ಧ್ವಜವನ್ನಿತ್ತು ಸ್ವಾಗತಿಸಿದರು.
 ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಹರೀಶ್ ಪೂಂಜಾ, ಡಾ.ವೈ. ಭರತ್ ಶೆಟ್ಟಿ, ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯಪೂಜಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ದೇವಪ್ಪ ಪೂಜಾರಿ, ಪ್ರಮುಖರಾದ ಜಗದೀಶ್ ಶೇಣವ, ಪೂಜಾ ಪೈ, ಉದಯಕುಮಾರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ,ಕಿಶೋರ್ ಭಂಡಾರಿ ಮೊದಲಾದವರು‌ ಇದಕ್ಕೆ ಸಾಕ್ಷಿಯಾದರು.
 ಪೂಜಾರಿಯವರ ಆಶೀರ್ವಾದ ಪಡೆದು ಬಂದಿದ್ದೆನೆ;
 ಈ ಸಂದರ್ಭದಲ್ಲಿ ಮಾತನಾಡಿದ ಕವಿತಾ ಸನೀಲ್, ಅವರು 22 ವರ್ಷದ  ಸುದೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆ, ಮೇಯರ್ ಆಗಿ ಕಾರ್ಯನಿರ್ವಹಿಸಿದ್ದೆನೆ. ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿಯವರು ತನ್ನನ್ನು ರಾಜಕೀಯವಾಗಿ ಬೆಳೆಸಿದ್ದು, ಪಕ್ಷ ಸೇರ್ಪಡೆಗೆ ಮುನ್ನ ಅವರ ಮನೆಗೆ ತೆರಳಿ, ಆರ್ಶೀವಾದವನ್ನು ಪಡೆದು ಬಂದಿದ್ದೆನೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ, ಬಿಜೆಪಿಯ ವಿಚಾರಧಾರೆಯನ್ನು ಒಪ್ಪಿಕೊಂಡು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಬಿಜೆಪಿ ಸೇರ್ಪಡೆಯಾಗುತ್ತಿದೆನೆ ಎಂದರು.
 ಮುಂದಿನ ದಿನಗಳಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತೆಯಾಗಿದ್ದುಕೊಂಡು ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದ ಅವರು, ತಾನು ಒರ್ವ ದೈವಭಕ್ತೆಯಾಗಿ ಸನಾತನ ಹಿಂದೂ ಧರ್ಮದವಳಾಗಿದ್ದು,ಅಯೋಧ್ಯೆಯಲ್ಲಿ‌ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆದಿರುವುದು ತನಗೆ ಅತ್ಯಂತ ಸಂತಸ ತಂದಿದೆ ಎಂದರು.
ಹುಬ್ಬಳ್ಳಿ ಘಟನೆಗೆ ಖಂಡನೆ:
 ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಘಟನೆಗಳು ಮನಸ್ಸಿಗೆ ನೋವು ತಂದಿದೆ.

  ಹುಬ್ಬಳ್ಲಿಯಲ್ಲಿ ವಿದ್ಯಾರ್ಥಿನಿ ನೇಹಾಳ ಬರ್ಬರ ಹತ್ಯೆ ಖಂಡನೀಯವಾಗಿದ್ದು, ರಾಜ್ಯ ಸಿಎಂ, ಡಿಸಿಎಂ, ಗೃಹಮಂತ್ರಿಗಳಾದಿಯಾಗಿ ಈ ಘಟನೆಯ ಬಗ್ಗೆ ನೀಡುತ್ತಿರುವ ಹೇಳಿಕೆ ಅತ್ಯಂತ ಬೇಸರ ತಂದಿದ್ದು, ಇದನ್ನು‌ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಬೂಡಾ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ ಸೇರ್ಪಡೆಯಾದವರ ಪಟ್ಟಿ ವಾಚಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2