ಮುಂಬೈ ಉದ್ಯಮಿಯಿಂದ ಉಚ್ಚಿಲ ಗ್ರಾಮ ಪಂಚಾಯಿತಿಗೆ ಆಂಬುಲೆನ್ಸ್ ಹಸ್ತಾಂತರ
ಮುಂಬೈ ಉದ್ಯಮಿಯಿಂದ ಉಚ್ಚಿಲ ಗ್ರಾಮ ಪಂಚಾಯಿತಿಗೆ ಆಂಬುಲೆನ್ಸ್ ಹಸ್ತಾಂತರ
ಉಡುಪಿ\ ಉಚ್ಚಿಲ: ಮುಂಬೈ ಉದ್ಯಮಿ ಹಾಗೂ ಉಚ್ಚಿಲ ಬಡಾ ಗ್ರಾಮದಲ್ಲಿ ರೆಸಾರ್ಟ್ ಹೊಂದಿರುವ ಕರುಣಾಕರ ಶೆಟ್ಟಿಯವರು ಉಚ್ಚಿಲ ಬಡಾ ಗ್ರಾಮ ಪಂಚಾಯತಿಗೆ ಸುಸಜ್ಜಿತ ಆಂಬುಲೆನ್ಸ್ ನ್ನು ಉಚ್ಚಿಲ ಮಹಾಲಕ್ಷ್ಮಿ ದೇವಳದ ಆವರಣದಲ್ಲಿ ಮಂಗಳವಾರ ಪಂಚಾಯಿತಿಗೆ ಹಸ್ತಾಂತರಿಸಿದರು.
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ (Nadoja Dr G. Shankar) ರವರು ಉಚ್ಚಿಲ ಬಡ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ರವರಿಗೆ (Shivkumar Mendon) ಆಂಬುಲೆನ್ಸ್ ಕೀಲಿ ಕೈಯನ್ನು ನೀಡಿ, ಗ್ರಾಮ ಪಂಚಾಯತ್ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಆಂಬುಲೆನ್ಸ್ ದಾನಿ ಕರುಣಾಕರ್ ಶೆಟ್ಟಿ, (Karunakar Shetty Mumbai, peninsula beach resort Bada Yermal) ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಗಂಗಾಧರ ಸುವರ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ , ಬಡಾ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.