ರಾಜ್ಯಸಭೆಗೆ ಗಾಲಿ ಖುರ್ಚಿಯಲ್ಲಿ ಬಂದ ಮನಮೋಹನ್ ಸಿಂಗ್
ರಾಜ್ಯಸಭೆಗೆ ಗಾಲಿ ಖುರ್ಚಿಯಲ್ಲಿ ಬಂದ ಮನಮೋಹನ್ ಸಿಂಗ್
ನವದೆಹಲಿ: ದೆಹಲಿ ಸೇವಾ ಮಸೂದೆಯ ವಿರುದ್ಧ ಮತ ಚಲಾಯಿಸಲು ರಾಜ್ಯಸಭೆಯ ಕಲಾಪಕ್ಕೆ ಅನಾರೋಗ್ಯದ ನಡುವೆಯೂ ಗಾಲಿಕುರ್ಚಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಗಮಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಸದಸ್ಯರು ಇದನ್ನು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.
ಪ್ರತಿಪಕ್ಷಗಳು ಮನಮೋಹನ್ ಸಿಂಗ್ ಅವರ ಬದ್ಧತೆಯನ್ನು ಹೊಗಳಿದರೆ, ಬಿಜೆಪಿ ಇದನ್ನು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕರೆದಿದೆ.
ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಮಾತನಾಡಿ, ಅನಾರೋಗ್ಯದ ಮಧ್ಯೆಯೂ ಸದನಕ್ಕೆ ಹಾಜರಾಗಿದ್ದಕ್ಕೆ ಮಾಜಿ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಇಂದು ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಒಗ್ಗಟ್ಟಿಗೆ ದಾರಿದೀಪವಾಗಿ ನಿಂತರು. ವಿಶೇಷವಾಗಿ ಕರಾಳ ಸುಗ್ರೀವಾಜ್ಞೆಗೆ ವಿರುದ್ಧವಾಗಿ ಮತ ಚಲಾಯಿಸಲು ಬಂದರು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಅವರ ಅಚಲವಾದ ಬದ್ಧತೆ, ಆಳವಾದ ಸ್ಫೂರ್ತಿ ಇದರಲ್ಲಿ ಕಂಡು ಬರುತ್ತದೆ. ಅವರ ಅಮೂಲ್ಯ ಬೆಂಬಲಕ್ಕಾಗಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಧನ್ಯವಾದಗಳು ಸರ್ ಎಂದು ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಕಾಂಗ್ರೆಸ್‌ನ ಈ ಹುಚ್ಚುತನವನ್ನು ದೇಶ ನೆನಪಿಸಿಕೊಳ್ಳುತ್ತದೆ. ಇಂತಹ ಅನಾರೋಗ್ಯ ಸ್ಥಿತಿಯಲ್ಲೂ ಸಂಸತ್ತಿನಲ್ಲಿ ಮಾಜಿ ಪ್ರಧಾನಿಯೊಬ್ಬರನ್ನು ತಡರಾತ್ರಿ ಗಾಲಿಕುರ್ಚಿಯ ಮೇಲೆ ಕೂರಿಸಿಕೊಂಡು ಕಾಂಗ್ರೆಸ್ ಬಂದಿದೆ ಎಂದು ಟೀಕಿಸಿದೆ.
ರಾಜ್ಯಸಭೆಯಲ್ಲಿ ಅನಾರೋಗ್ಯದ ಮಧ್ಯೆಯೂ ಮನಮೋಹನ್ ಸಿಂಗ್ ಅವರ ಉಪಸ್ಥಿತಿಯ ಕುರಿತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಬಿಜೆಪಿಗೆ ತಿರುಗೇಟು ನೀಡಿದ್ದು, ಇದು ಮಾಜಿ ಪ್ರಧಾನಿಗೆ ಪ್ರಜಾಪ್ರಭುತ್ವದಲ್ಲಿ ಇರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಮೇಲ್ಮನೆಯ ಕಲಾಪದಲ್ಲಿ ಮನಮೋಹನ್ ಸಿಂಗ್ ಅವರಲ್ಲದೆ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ ಸಿಭು ಸೊರೆನ್ ಕೂಡ ಉಪಸ್ಥಿತರಿದ್ದರು.