ವಿಶ್ವ ಬಂಟರ ಸಾಂಸ್ಕೃತಿಕ ವೈಭವ: ಬಂಟ್ವಾಳ ಪ್ರಥಮ, ಸುರತ್ಕಲ್ ದ್ವಿತೀಯ (World Bunts Sammelana)
ವಿಶ್ವ ಬಂಟರ ಸಾಂಸ್ಕೃತಿಕ ವೈಭವ: ಬಂಟ್ವಾಳ ಪ್ರಥಮ, ಸುರತ್ಕಲ್ ದ್ವಿತೀಯ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಆಶ್ರಯದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಉಡುಪಿಯಲ್ಲಿರುವ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದಲ್ಲಿ ನಡೆದ ವಿಶ್ವ ಬಂಟರ ಸಾಂಸ್ಕೃತಿಕ ವೈಭವದಲ್ಲಿ ಬಂಟ್ವಾಳ ಬಂಟರ ಸಂಘ ಪ್ರಥಮ ಹಾಗೂ ಸುರತ್ಕಲ್ ಬಂಟರ ಸಂಘ ರನ್ನರ್ಸ್ ಅಪ್ ಪ್ರಶಸ್ತಿ ಪಡೆದಿದೆ.
ಫಲಿತಾಂಶ ಈ ರೀತಿ ಇದೆ.
ಪ್ರಥಮ: ಬಂಟ್ವಾಳ ಬಂಟರ ಸಂಘ ಒಂದು ಲಕ್ಷ ರೂ. ನಗದು, ಪ್ರಶಸ್ತಿ,
ದ್ವಿತೀಯ: ಸುರತ್ಕಲ್ ಬಂಟರ ಸಂಘ 75 ಸಾವಿರ ನಗದು, ಪ್ರಶಸ್ತಿ,
ತೃತೀಯ: ಬೆಂಗಳೂರು ಬಂಟರ ಸಂಘ 50 ಸಾವಿರ ನಗದು, ಪ್ರಶಸ್ತಿ, ಚತುರ್ಥ ಬಹುಮಾನವನ್ನು ತಲಾ 25 ಸಾವಿರದಂತೆ ಜೆಪ್ಪು, ಮೀಂಜ ಮಂಜೇಶ್ವರ, ಗುರುಪುರ, ಕಾವೂರು, ತೋನ್ಸೆ ವಲಯ ಬಂಟರ ಸಂಘ ಪ್ರಶಸ್ತಿ ಪಡೆದಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ(Aikala Harish Shetty), ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ(Kanyana Sadashiv Shetty), ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ (Karnire Vishwanath Shetty), ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ (Jayakar Shetty Indrali), ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ಜೊತೆ ಕಾರ್ಯದರ್ಶಿ, ವಿಶ್ವ ಬಂಟರ ಸಾಂಸ್ಕೃತಿಕ ವೈಭವದ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ, ಸಹ ಸಂಚಾಲಕ ಕರ್ನೂರ್ ಮೋಹನ್ ರೈ, ಕ್ರೀಡಾ ಸಂಚಾಲಕ ಗಿರೀಶ್ ಶೆಟ್ಟಿ ತೆಳ್ಳಾರ್, ಸಹ ಸಂಚಾಲಕ ಡಾ. ರೋಶನ್ ಕುಮಾರ್ ಶೆಟ್ಟಿ (Dr. Roshan Kumar Shetty), ಪ್ರಶಸ್ತಿ ವಿತರಿಸಿದರು.
ಸಾಂಸ್ಕೃತಿಕ ವೈಭವದಲ್ಲಿ ಒಟ್ಟು 30 ಬಂಟರ ಸಂಘಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ತೀರ್ಪುಗಾರರಾಗಿ ಮಾನಸಿ ಸುಧೀರ್, ಪ್ರಥಮ ಪ್ರಸಾದ್ ರಾವ್, ದಿಲೀಪ್ ಶೆಟ್ಟಿ ಸಹಕರಿಸಿದ್ದರು.