ಮೂಡುಬಿದಿರೆ : ಸುವರ್ಣ ಕರ್ನಾಟಕ ರಥಯಾತ್ರೆಗೆ ಸ್ವಾಗತ (Moodabidri : Welcome toth Suvarna Karnataka Ratha Yathre)
ಮೂಡುಬಿದಿರೆ : ಸುವರ್ಣ ಕರ್ನಾಟಕ ರಥಯಾತ್ರೆಗೆ ಸ್ವಾಗತ ಮೂಡುಬಿದಿರೆ: ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ನೆಲ, ಜಲವನ್ನು ಉಳಿಸಿಕೊಂಡು ಬರಬೇಕಾದ ಹೊಣೆಗಾರಿಕೆ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಸರಕಾರದ ಆಶಯದಂತೆ ನಾವೆಲ್ಲರೂ ನಾಡುನುಡಿ ಪ್ರೀತಿಯ ಜೊತೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಬೇಕಾಗಿದೆ ಎಂದು ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ನುಡಿದರು. ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣಗೊಂಡು ೫೦ ವರ್ಷಗಳು ತುಂಬಿದ ಸುವರ್ಣ ಸಂಭ್ರಮದ ಸಂದರ್ಭದ ಸಲುವಾಗಿ ‘ಕನ್ನಡ ಜ್ಯೋತಿ ರಥಯಾತ್ರೆ’ಯನ್ನು ಮೂಡುಬಿದಿರೆ ತಾಲೂಕು ಆಡಳಿತ […]