ಚನ್ನಗಿರಿ ಬಾಲಕಿಯರ ಹಾಸ್ಟೆಲ್ ಗೆ ಶಾಸಕ ದಿಡೀರ್ ಭೇಟಿ
ಬಾಲಕಿಯರ ಹಾಸ್ಟೆಲ್ ಗೆ ಶಾಸಕ ಬಸವರಾಜ್ ವಿ. ಶಿವಗಂಗಾ ದಿಢೀರ್ ಭೇಟಿ: ದಾವಣಗೆರೆ: ಶಾಸಕ ಬಸವರಾಜ್ ವಿ. ಶಿವಗಂಗಾ ದಿಢೀರ್ ಆಗಿ ಚನ್ನಗಿರಿ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಜೊತೆ ಚರ್ಚೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು. ಇದು ವಿದ್ಯಾರ್ಥಿನಿಯರ ಖುಷಿಗೂ ಕಾರಣವಾಯ್ತು. ಚನ್ನಗಿರಿಯ ಬಸವೇಶ್ವರ ನಗರದ ಪೊಲೀಸ್ ಕ್ವಾರ್ಟರ್ಸ್ ಬಳಿಯಿರುವ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಮಾಲೋಚನೆ ನಡೆಸಿದರು. ಹಾಸ್ಟೆಲ್ ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಕುರಿತಂತೆಯೂ ಮಾಹಿತಿ ಪಡೆದರು. […]