ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ(Donation of Gas stove by Javaner Uchila Organization to Uchila Anganavadi center)
ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಜವನೆರ್ ಉಚ್ಚಿಲ ಸಂಸ್ಥೆಯಿಂದ ಗ್ಯಾಸ್ ಸ್ಟೌವ್ ಕೊಡುಗೆ.
(Uchila)ಉಚ್ಚಿಲ: ಉಚ್ಚಿಲ ಬಡ ಗ್ರಾಮ ಪಂಚಾಯತ್ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಉಚ್ಚಿಲದ ಖ್ಯಾತ ಸಮಾಜ ಸೇವಾ ಸಂಸ್ಥೆ ಜವನೆರ್ ಉಚ್ಚಿಲ (Javaner Uchila) ಸಂಸ್ಥೆಯಿಂದ ಶುಕ್ರವಾರ ಗ್ಯಾಸ್ ಸ್ಟೌವ್ ಕೊಡುಗೆಯಾಗಿ ನೀಡಲಾಯಿತು.
ಇದೇ ಸಂದರ್ಭ ಅಂಗನವಾಡಿಯ ಶಿಕ್ಷಕಿ ಶ್ರೀಮತಿ ಉಷಾರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಜವನೆರ್ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ ಉಚ್ಚಿಲ (Prabhakara Poojary Uchila), ಕಾರ್ಯದರ್ಶಿ ಮನೋಹರ್ ಉಚ್ಚಿಲ(Manohar Uchila), ಪೂರ್ವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ(Balakrishna Poojary Uchila), ದಿನೇಶ್ ಸುವರ್ಣ ಉಚ್ಚಿಲ(Dinesh Suvarna), ಉಮೇಶ್ ಎಸ್. ದೇಜಾಡಿ(Umesh Dejadi), ಅಂಗನವಾಡಿ ಶಿಕ್ಷಕಿ ಶ್ರೀಮತಿ ಪ್ರಮೀಳಾ, ಅಮಿತಾ ಮನೋಹರ್ ಉಪಸ್ಥಿತರಿದ್ದರು.