# Tags
#ಅಪರಾಧ #ಕರಾವಳಿ #ವಿಡಿಯೋ

ಉಡುಪಿ ಕಾಲೇಜಿನಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ, ತನಿಖೆ ಮುಗಿಸಲು ಇನ್ನೂ ಸ್ವಲ್ಪ ದಿನ ಬೇಕು- ಖುಷ್ಬೂ

ಉಡುಪಿ ಕಾಲೇಜಿನಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ, ತನಿಖೆ ಮುಗಿಸಲು ಇನ್ನೂ ಸ್ವಲ್ಪ ದಿನ ಬೇಕು- ಖುಷ್ಬೂ

 ಉಡುಪಿ: ಉಡುಪಿಯ ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಮಾಡಲಾಗಿದೆ ಎಂಬ ವಿಷಯವು ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರು ಈ ಸಂಬಂಧ ತನಿಖೆಗಾಗಿ ನೆನ್ನೆ ಉಡುಪಿಗೆ ಆಗಮಿಸಿದ್ದರು.

 ಇವತ್ತು ಬೆಳಿಗ್ಗೆ 10 ಗಂಟೆಗೆ ನೇತ್ರ ಜ್ಯೋತಿ ಕಾಲೇಜಿಗೆ ತೆರಳಿದ ಖುಷ್ಬೂ ಅವರು ಸುಮಾರು ನಾಲ್ಕೂವರೆ ತಾಸು ವಿಚಾರಣೆ ನಡೆಸಿದರು.

  ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಸಹಿತ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದರು.

 ನಾಲ್ಕೂವರೆ ತಾಸಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಏನೂ ತೀರ್ಪು ನೀಡಲಾಗದು. ಇನ್ನಷ್ಟು ದಿನಗಳು ಬೇಕಾಗುತ್ತವೆ. ಆದರೆ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿತ್ತು ಎಂಬುದು ಬರೀ ವದಂತಿ ಮಾತ್ರ.

ಕಾಲೇಜಿನದು ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ಅದು ಕೂಡ ಫೇಕ್ ವಿಡಿಯೋ ಆಗಿದೆ. ದಯವಿಟ್ಟು ಇಂತಹ ಫೇಕ್ ವಿಡಿಯೋಗಳನ್ನು ಯಾರೂ ಕೂಡ ಹಬ್ಬಿಸಬಾರದು. ವಿಚಾರಣೆಗೆ ಇನ್ನಷ್ಟು ದಿನ ಬೇಕಾಗುತ್ತದೆ. ಈ ಪ್ರಕರಣದಲ್ಲಿ ಹೆಣ್ಣು ಮಕ್ಕಳ ಭವಿಷ್ಯ ಅಡಗಿದೆ ಎಂದು ಹೇಳಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2