# Tags
#ಅಪರಾಧ

ಉಡುಪಿ ನೇಜಾರುವಿನಲ್ಲಿ ನಡೆದ ಅಮಾನವೀಯ ಕೊಲೆ ಮನುಷ್ಯತ್ವವನ್ನು ಮರೆ ಮಾಚುವಂತಾಗಿದೆ : ರಮೀಜ್‌ ಹುಸೈನ್‌

ಉಡುಪಿ ನೇಜಾರುವಿನಲ್ಲಿ ನಡೆದ ಅಮಾನವೀಯ ಕೊಲೆ ಮನುಷ್ಯತ್ವವನ್ನುಮರೆ ಮಾಚುವಂತಾಗಿದೆ : ರಮೀಜ್‌ ಹುಸೈನ್

ಉಡುಪಿ: ಉಡುಪಿಜಿಲ್ಲೆಯ ನೇಜಾರುವಿನಲ್ಲಿ ನಡೆದ  ಕೂಲೆ ಘಟನೆ ಎಲ್ಲಾರನ್ನೂ ನಿಬ್ಬೆರಾ‌ಗುವಂತೆ ಮಾಡಿದೆ ಎಂದು ಕಾಪು ಬ್ಲಾಕ್ ಯುವ  ಕಾಂಗ್ರೆಸ್ ಅಧ್ಯಕ್ಷ ‌ರಮೀಜ್ ಹುಸೇನ್ (Kaup BLOCK Youth Congress President Rameez Husain) ಹೇಳಿದ್ದಾರೆ.

ಅವರು ಸೋಮವಾರ ಮಲ್ಪೆ ಸಮೀಪದ ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವನ್ನು ಅಮಾನವೀಯತೆಯಿಂದ ಕೊಲೆ ಗೈದ ಬಗ್ಗೆ ಕೊಲೆಗಾರನ ಬಗ್ಗೆ ಪ್ರತಿಕ್ರಿಯೆ ನೀಡಿದರು.

 ತಾಯಿ ಮಕ್ಕಳನ್ನು ಕೂಂದು ಮರೆಯಾದ ಕೂಲೆಗಾರನನ್ನು ಅದಷ್ಟು ಬೇಗ ಬಂಧಿಸಿ ನ್ಯಾಯ ಒದಗಿಸ ಬೇಕು.‌ ಈ ಘಟನೆಯನ್ನು ವಿಶೇಷವಾಗಿ ಪರಿಗಣಿಸಿ ಜಿಲ್ಲಾ  ಪೋಲೀಸ್ ವರಿಷ್ಟಾಧಿಕಾರಿಯವರು ನೇತೃತ್ವ ವಹಿಸಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ದೇಶದ ಜನ ದೀಪಾವಳಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಳ್ಳಂಬೆಳಿಗ್ಗೆ  ಒಂದೇ ಮನೆಯ ತಾಯಿ ಹಾಗು ಮೂರು  ಮಕ್ಕಳನ್ನು ಕೊಂದು  ಹಾಕಿದ್ದು ದುಖಕರವಾಗಿದೆ. ಈ ಘಟನೆಯಿಂದ ಜಿಲ್ಲೆಯ ಜನತೆ ದುಖಿಸುವಂತೆ ಮಾಡಿದೆ.‌ ಮನುಷ್ಯನ ಜೀವಕ್ಕೆ ಬೆಲೆ ಇಲ್ಲದ ರೀತಿಯಾಗಿದ್ದು, ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಘಟನೆ ನಡೆದು ಎರಡು ದಿನ ಕಳೆದರೂ ಆರೋಪಿ ಪತ್ತೆಯಾಗದಿರುವುದರಿಂದ  ಈ ಘಟನೆಯನ್ನು ಸರಕಾರ  ಗಂಭೀರವಾಗಿ ಪರಿಗಣಿಸಿ ಕೂಲೆಗಾರನನ್ನು ಬಂಧಿಸಿ,   ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ರಮೀಜ್‌ ಹುಸೈನ್‌ ಆಗ್ರಹಿಸಿದ್ದಾರೆ.

 ಮುಂದೆ ಈ ರೀತಿಯ ಘಟನೆಯ ನಡೆಯದಂತೆ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು ಎಂದು ಸರಕಾರಕ್ಕೆ ಮನವಿ ಮಾಢುತ್ತೇನೆ ಎಂದೂ ಅಧ್ಯಕ್ಷ ‌ರಮೀಜ್ ಹುಸೇನ್ ಪ್ರತಿಕಾ ಹೇಳಿಕೆ ನೀಡಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2