# Tags
#ಕರಾವಳಿ

ಉಡುಪಿ ಪುತ್ತಿಗೆ ಪರ್ಯಾಯೋತ್ಸವಕ್ಕೆ ಸಕಲ ಸಿದ್ಧತೆ:  ಪರ್ಯಾಯೋತ್ಸವಕ್ಕೆ ಕೆನರಾ ಬ್ಯಾಂಕಿಗೆ ಮನವಿ (Canara Bank)

ಉಡುಪಿ ಪುತ್ತಿಗೆ ಪರ್ಯಾಯೋತ್ಸವಕ್ಕೆ ಸಕಲ ಸಿದ್ಧತೆ:  ಪರ್ಯಾಯೋತ್ಸವಕ್ಕೆ ಕೆನರಾ ಬ್ಯಾಂಕಿಗೆ ಮನವಿ

 ಉಡುಪಿ:  ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳವರ ಚತುರ್ಥ ಪರ್ಯಾಯವು (Sri Sugunendra Theertha Swameejis 4th Paryaya) ವೈಭೋವೋಪೇತವಾಗಿ ನಡೆಸಲು ಕೆನರಾ ಬ್ಯಾಂಕಿನ  ಆಡಳಿತ  ನಿರ್ದೇಶಕರಾದ ಶ್ರೀ ಕೆ. ಸತ್ಯನಾರಾಯಣ ರಾಜುರವರಲ್ಲಿ (Canara Bank Director K. Satyanarayana Raju) ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್. ಎಸ್. ಬಲ್ಲಾಳರವರು ಆರ್ಥಿಕ ಸಹಕಾರದ ಮನವಿ ಸಲ್ಲಿಸಿದರು.

 ಇದಕ್ಕೆ ಸ್ಪಂದಿಸಿದ  ಸತ್ಯನಾರಾಯಣ ರಾಜುರವರು, ಪುತ್ತಿಗೆ ಪರ್ಯಾಯಕ್ಕೆ ತಮ್ಮ ಸಂಸ್ಥೆಯಿಂದ ಸರ್ವ ಸಹಕಾರವನ್ನು ನೀಡಲಾಗುವುದು  ಎಂದು ತಿಳಿಸಿದರು.

   ಶ್ರೀ ಮಠದ ದಿವಾನರಾದ ಶ್ರೀ ನಾಗರಾಜ್ ಆಚಾರ್ಯ, ಕೋಶಾಧಿಕಾರಿ ಶ್ರಿ ರಂಜನ್ ಕಲ್ಕೂರ̈ (Ranjan Kalkura), ಸಂಚಾಲಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ (Indrali Jayakara Shetty), ಶ್ರಿ ರಮೇಶ್ ಭಟ್ ಕೆ, ಸಮಿತಿ ಸದಸ್ಯರುಗಳಾದ ಶ್ರೀ ರವೀಂದ್ರ ಆಚಾರ್ಯ, ಶ್ರೀ ಉಮೇಶ್ ಭಟ್, ಹಾಗು ಬ್ಯಾಂಕಿನ ಅಧಿಕಾರಿಗಳಾದ ಶ್ರೀ ಎಂ. ಜಿ . ಪಂಡಿತ್‌,  ಶ್ರೀ ವಿನೋದ್ ವಿಷ್ಣು ಜೋಶಿ, ಶ್ರೀ ರಾಜೀವ್ ತುಕ್ರಾಲ್, ಶ್ರೀ ರವಿ ಪ್ರಸಾದ್ ಭಟ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2