ಕನ್ನಡ ಸಹಿತ 5 ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ಯೂಟ್ಯೂಬರ್ ಧ್ರುವ್ ರಾಠಿ (Dhruva Rathi starts 5 YouTube channels, including Kannada)
ಕನ್ನಡ ಸಹಿತ 5 ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ಯೂಟ್ಯೂಬರ್ ಧ್ರುವ್ ರಾಠಿ
(New Dhelhi)ಹೊಸದಿಲ್ಲಿ: ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರು ಕನ್ನಡ, ತಮಿಳು , ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.
ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದ್ದ ಯೂಟ್ಯೂಬ್ ವಿಡಿಯೋಗಳು ಭಾರೀ ವೈರಲ್ ಆಗಿ ದೇಶದಾದ್ಯಂತ ಚರ್ಚೆಯಾಗಿದೆ.
ತನ್ನ ವಿಡಿಯೋ ಎಲ್ಲಾ ಭಾಷಿಕರಿಗೆ ತಲುಪುವಂತೆ ಮಾಡಲು ಧ್ರುವ್ ರಾಠಿ ಈಗ ಕನ್ನಡ ಸಹಿತ ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆ ಗೆಲ್ಲಲು ವಿರೋಧ ಪಕ್ಷಗಳನ್ನು ಹೇಗೆ ಕಟ್ಟಿ ಹಾಕಿದೆ?. ದೇಶದ ಉನ್ನತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ಸವಿವರವಾದ ವಿಡಿಯೋ ಬಿಡುಗಡೆಗೊಳಿಸಿದ್ದರು. ಅಲ್ಲದೇ ಚುನಾವಣಾ ಬಾಂಡ್ ಕುರಿತ ವಿಡಿಯೋ ಕೂಡ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿತ್ತು.
ಚುನಾವಣಾ ಬಾಂಡ್‌ಗಳು ರಾಜಕೀಯ ನಾಯಕರ ಬಂಧನಕ್ಕೆ ಹೇಗೆ ಕಾರಣವಾಗಿದೆ ಎನ್ನುವುದನ್ನು ಸಾಕಷ್ಟು ಆಧಾರಗಳೊಂದಿಗೆ ತಮ್ಮ ವಿಡಿಯೋದಲ್ಲಿ ಮಾಹಿತಿ ನೀಡಿದ್ದರು. ನಂತರ ಹಲವು ಬಲಪಂಥೀಯರು ಧ್ರುವ್ ರಾಠಿ ಅವರನ್ನು ಗುರಿಯಾಗಿರಿಸಿದ್ದರು.
ಇದೀಗ ಅವರು ಎಐ ತಂತ್ರಜ್ಞಾನದ ಮೂಲಕ ಕನ್ನಡ ಸೇರಿ ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಧ್ರುವ್ ರಾಠಿ, “ತಮಿಳು, ತೆಲುಗು, ಬೆಂಗಾಳಿ, ಕನ್ನಡ, ಮರಾಠಿ ಸೇರಿ ಇಂದು 5 ಭಾರತೀಯ ಭಾಷೆಗಳಲ್ಲಿ ನನ್ನ ವಿಡಿಯೋ ಬಿಡುಗಡೆಯಾಗಿದೆ. ಈ ರಾಜ್ಯಗಳ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರಮುಖ ವೀಡಿಯೊ ಈಗಾಗಲೇ ಈ ಚಾನಲ್‌ಗಳಲ್ಲಿ ಲೈವ್ ಆಗಿದೆ” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.