# Tags
#ಶಾಲಾ ಕಾಲೇಜು

“ಕುದ್ರು” ಕನ್ನಡ ಸಿನಿಮಾ ತೆರೆಗೆ ರೆಡಿ

“ಕುದ್ರು” ಕನ್ನಡ ಸಿನಿಮಾ ತೆರೆಗೆ ರೆಡಿ

 ಮಂಗಳೂರು: ಮೋಕ್ಷ ಕ್ರಿಯೇಷನ್ಸ್ ಲಾಂಛನದಲ್ಲಿ ಭಾಸ್ಕರ ನಾಯ್ಕ ನಿದೇಶನ, ನಿರ್ಮಾಣದಲ್ಲಿ ತಯಾರಾದ ಕುದ್ರು ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.

ಕುದ್ರು ಸಿನಿಮಾದ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿದೆ.

 ಕುದ್ರು ಸಿನಿಮಾದಲ್ಲಿ ಉತ್ತಮ ಸಂದೇಶವುಳ್ಳ ಕತೆಯಿದೆ.‌ ಮತ್ತೊಂದು ಕರಾವಳಿ ಭಾಗದ ಚಿತ್ರ ಕನ್ನಡ ಹಾಗೂ ತುಳು ಭಾಷೆಯಲ್ಲಿ ಕುದ್ರು ಎಲ್ಲೆಡೆ ಸದ್ದು ಮಾಡುತ್ತಿದೆ.

 “ಕುದ್ರು” ವಿನ  ಮೂರನೇ ಹಾಡು ಉಡುಪಿ ಹಾಗೂ ಮಲೆನಾಡು ಪ್ರದೇಶದ ಸುಂದರ ಪರಿಸರದಲ್ಲಿ  ಚಿತ್ರಿಕರಿಸಿದ ಗೀತೆಯಾಗಿದೆ. “ಉಡಾಯಿಸು” ಅನ್ನುವ  ಗೀತೆಯನ್ನು ಕಾಲೇಜು ಹುಡುಗರಿಗಾಗಿ ಚಿತ್ರೀಕರಿಸಿದ  ಹಾಡು. ಕಾಲೇಜ್ ನಲ್ಲಿ ಕ್ಲಾಸ್ ಬಂಕ್ ಮಾಡಿ ಎಂಜಾಯ್ ಮಾಡುವ ಗೀತೆಯಿದು. ಕಲ್ಯಾಣಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ.

 ನೀರಿನಿಂದ ಸುತ್ತುವರೆದ ದ್ವೀಪವನ್ನು ತುಳುವಿನಲ್ಲಿ “ಕುದ್ರು ಎನ್ನುತ್ತಾರೆ. ಈ ಚಿತ್ರದ ಕಥೆಯನ್ನು ಭಾಸ್ಕರ ನಾಯ್ಕ್ ಬರೆದಿದ್ದು, ಅವರೇ ನಿರ್ದೇಶಕರಾಗಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತು ಕೊಂಡಿದ್ದಾರೆ.

“ಕುದ್ರು” ದ್ವೀಪದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮೂರು ಪಂಗಡದವರು ವಾಸಿಸುತ್ತಿರುತ್ತಾರೆ. ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಈ ರೀತಿಯಲ್ಲಿ  ಚಿತ್ರದ ಕಥೆ ಸಾಗುತ್ತದೆ. ಉಡುಪಿ, ಬೆಂಗಳೂರು, ಗೋವಾ  ಹಾಗೂ ಸೌದಿ ಅರೇಬಿಯಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಸ್ವಿಮ್ ಸೂಟ್ ನಲ್ಲಿ ನೀರಿಂದ ಎದ್ದು ಬರುವ ಮೂಲಕ ನಾಯಕಿ ಡೈನ ಡಿಸೋಜ ಪಡ್ಡೆ ಹುಡುಗರ ನಿದ್ದೆ ಕೆಡಿಸಿದಾರೆ.

“ಕುದ್ರು” ಭಾಸ್ಕರ ನಾಯ್ಕ ಅವರ ಮೊದಲ ನಿರ್ದೇಶನದ ಚಿತ್ರ. ಒಂದು ಸಣ್ಣ ದ್ವೀಪದಲ್ಲಿ ಬೇರೆಬೇರೆ ಸಮುದಾಯದವರು ಸಾಮರಸ್ಯದಿಂದ ಬಾಳುತ್ತಿದಾಗ, ಒಂದು ವಾಟ್ಸಾಪ್ ಸಂದೇಶ ಹೇಗೆ ಅಶಾಂತಿಯನ್ನು  ತಂದು ಹಾಕುತ್ತದೆ ಹಾಗೂ ಬಂದ ತೊಂದರೆಯನ್ನು ನಿವಾರಣೆ ಮಾಡಿಕೊಂಡು‌ ಮತ್ತೆ ಸಾಮರಸ್ಯದಿಂದ ಹೇಗೆ ಜೀವನ ನಡೆಸಬಹುದು ಎಂಬುದನ್ನು “ಕುದ್ರು” ಚಿತ್ರದಲ್ಲಿ ತೋರಿಸಲಾಗಿದೆ.

ಹರ್ಷಿತ್ ಶೆಟ್ಟಿ, ಗಾಡ್ವಿನ್ ಹಾಗೂ ಫರ್ಹಾನ್ ಚಿತ್ರದ ನಾಯಕರಾಗಿ ನಟಿಸಿದ್ದು, ಪ್ರಿಯಾ ಹೆಗ್ಡೆ, ವಿನುತ ಹಾಗೂ ಡೈನ ಡಿಸೋಜ ನಾಯಕಿಯಾಗಿ ಅಭಿನಯಿಸಿದ್ದಾರೆ. ಪ್ರತೀಕ್ ಕುಂಡು ಸಂಗೀತ ನಿರ್ದೇಶನ ಮಾಡಿ, ಸುದೇಶ್ನ ದಾಸ್ ಹಾಗೂ ಪ್ರತೀಕ್ ಕುಂಡು ದ್ವನಿ ಕೊಟ್ಟಿರುತ್ತಾರೆ. ಈ ಚಿತ್ರದಲ್ಲಿ ತುಂಟ ಮುಸ್ಲಿಂ ಸಮುದಾಯದ ಹುಡುಗಿಯಾಗಿ  ಸಕಲೇಶಪುರದ ಡೈನ ಡಿಸೋಜ, ಬ್ರಾಹ್ಮಣ ಹುಡುಗನಾಗಿ ಹರ್ಷಿತ್ ಶೆಟ್ಟಿ ಅಭಿನಯಿಸಿದ್ದಾರೆ. ಕ್ರಿಶ್ಚಿಯನ್ ಹುಡುಗನ ಪಾತ್ರಧಾರಿ ಗಾಡ್ವಿನ್ ಹಾಗೂ ಮುಸ್ಲಿಂ ಹುಡುಗನ  ಪಾತ್ರದಲ್ಲಿ ಅಭಿನಯಿಸಿರುವ ಫರ್ಹಾನ್ ಹಾಗೂ ಬ್ರಾಹ್ಮಣ ಹುಡುಗಿ ಪಾತ್ರಧಾರಿ ನಾಯಕಿ ಪ್ರಿಯಾ ಹೆಗ್ಡೆ ಅಭಿನಯಿಸಿದ್ದಾರೆ. ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2