ಕುಸ್ತಿಪಟುಗಳಿಗೆ ನ್ಯಾಯ ಒದಗಿಸಲು ಆಗ್ರಹ: ಕಾಪುವಿನಲ್ಲಿ ಡಬ್ಲೂö್ಯಐಎಂ ಪ್ರತಿಭಟನೆ
ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ ಪೋಸ್ಕೋ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕುಸ್ತಿಪಟುಗಳ ಮೇಲೆ ಪೊಲೀಸ್ ದಾಳಿ ಖಂಡಿಸಿ ಹಾಗು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಸಂಜೆ ೫ ಗಂಟೆಗೆ ವಿಮೆನ್ ಇಂಡಿಯಾ ಮೂಮೆಂಟ್ ಕಾಪು ಘಟಕದ ವತಿಯಿಂದ ಕಾಪು ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.
ವಿಮೆನ್ ಇಂಡಿಯನ್ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ನಾಜಿಯ ಮಾತನಾಡಿ, ರಾಷ್ಟಿçÃಯ ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ನಡೆಸಿದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕಳೆದ ಮೂರು ತಿಂಗಳಿನಿAದ ನಡೆಸುತ್ತಿದ್ದು, ಆರೋಪಿ ಬಿಜೆಪಿ ಸಂಸದನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ.
ಈ ದೇಶಕ್ಕೆ ಕೀರ್ತಿಯನ್ನು ತಂದAತಹ ಹೆಮ್ಮೆಯ ಮಹಿಳಾ ಕುಸ್ತಿಪಟುಗಳಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಅರೋಪಿಯನ್ನು ಬಂಧಿಸಲು ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಸ್ತಿಪಟುಗಳು ಹೊಸ ಸಂಸತ್ ಭವನ ಉದ್ಘಾಟನೆಯಂದು ಸಂಸತ್ ಭವನದ ಮುಂದೆ ಪ್ರತಿಭಟನೆಯನ್ನು ನಡೆಸುವ ವೇಳೆ ಪೊಲೀಸರು ಅವರ ಮೇಲೆ ದೌರ್ಜನ್ಯವನ್ನು ಎಸೆಗಿರುವುದು ಸರಿಯಲ್ಲ. ಸರ್ಕಾರದ ಈ ನೀತಿಯಿಂದ ಜಾಗತಿಕವಾಗಿ ದೇಶವು ತಲೆತಗ್ಗಿಸುವಂಯೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ರೈಮ ಕಾಪು, ಉಪಾಧ್ಯಕ್ಷೆ ನಸೀಮ, ಜೊತೆ ಕಾರ್ಯದರ್ಶಿ ಹಾಜಿರ, ವಿಮೆನ್ ಇಂಡಿಯನ್ ಮೂವ್ಮೆಂಟ್ ಕಾಪು ಘಟಕದ ಅಧ್ಯಕ್ಷೆ ಫರ್ಜಾನ ಪ್ರಧಾನ ಕಾರ್ಯದರ್ಶಿ ನೌಸೀನ್ ರವರು ಉಪಸ್ಥಿತಿತರಿದ್ದರು