ಕೆಳ ಪರ್ಕಳ : ಚಲಿಸುತ್ತಿದ್ದ ಬಸ್ ನಲ್ಲೇ ಮೂರ್ಛೆಹೋದ ಚಾಲಕ; ಕೂದಲೆಳೆಯ ಅಂತರದಲ್ಲಿ ಪಾರಾದ ಪ್ರಯಾಣಿಕರು
ಕೆಳ ಪರ್ಕಳ : ಚಲಿಸುತ್ತಿದ್ದ ಬಸ್ ನಲ್ಲೇ ಮೂರ್ಛೆಹೋದ ಚಾಲಕ; ಕೂದಲೆಳೆಯ ಅಂತರದಲ್ಲಿ ಪಾರಾದ ಪ್ರಯಾಣಿಕರು
ಹಿಂದಕ್ಕೆ ಚಲಿಸಿದ ಬಸ್. ಪ್ರಯಾಣಿಕರು ಸುರಕ್ಷಿತ
(Manipala) ಮಣಿಪಾಲ; ಚಾಲಕನೋರ್ವ ಮೂರ್ಛೆಹೋದ ಪರಿಣಾಮ ಸಿಟಿ ಬಸ್ ವೊಂದು ಹಿಂಮುಖವಾಗಿ ಚಲಿಸಿ ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ಉಡುಪಿಯ ಕೆಳಪರ್ಕಳದ ಬಳಿ ಗುರುವಾರ ಸಂಜೆ ಸಂಭವಿಸಿದೆ.
ಬೈರಂಜೆ ಹೋಗುವ ಸಿಟಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ. ಪಕ್ಕಕ್ಕೆ ಹಿಂದಕ್ಕೆ ಸರಿದು ಬಲಭಾಗಕ್ಕೆ ಚಲಿಸಿ ಮೋರಿ ಬಳಿನಿಂತಿದೆ. ಏರು ದಿನ್ನೆ ಸಮೀಪಿಸುತ್ತಿದ್ದಂತೆ ಚಾಲಕನಿಗೆಎದೆ ನೋವು ಕಾಣಿಸಿಕೊಂಡಿದೆ. ಬಸ್ಸು ಹಿಂದಕ್ಕೆ ಚಲಿಸಿ ನಿಂತಿದೆ. ತಕ್ಷಣ ಚಾಲಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಯಾಣಿಕರಿಗೂ ಹಿಂಬದಿ ವಾಹನ ಸವಾರರು ಇಲ್ಲದ ಇರುವುದರಿಂದ ಪ್ರಯಾಣಿಕರಿಗೇನು ತೊಂದರೆ ಆಗಿಲ್ಲ.
ಹಿಂದಕ್ಕೆ ಚಲಿಸಿದ ಬಸ್ಸನ್ನು ಮೇಲೆಕ್ಕೆತ್ತಲು ಮಣಿಪಾಲ ಪೊಲೀಸರು ಹರಸಾಹಸ ಮಾಡಿದರು. ಒಂದು ಗಂಟೆ ರಸ್ತೆ ಟ್ರಾಫಿಕ್ ಜಾಮ್ ಆಗಿದೆ.