ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಅಥ್ಲೆಟಿಕ್ಸ್ ಕ್ರೀಡಾಕೂಟ: ಸ್ತುತಿ ಪಿ. ಶೆಟ್ಟಿಗೆ ರಜತ ಪದಕ (Stuthi P Shetty got silver medal in youth games athletics)
ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಅಥ್ಲೆಟಿಕ್ಸ್ ಕ್ರೀಡಾಕೂಟ: ಸ್ತುತಿ ಪಿ. ಶೆಟ್ಟಿಗೆ ರಜತ ಪದಕ
(Udupi) ಉಡುಪಿ: ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ (Vidyodaya PU College Udupi), ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿ, ಸ್ತುತಿ ಪಿ ಶೆಟ್ಟಿ, ಕಿದಿಯೂರು ಇವರು ಮಿಡ್ಲೇ ರಿಲೇಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ರಜತ ಪದಕ ಪಡೆದಿದ್ದಾರೆ.
ಪ್ರಸ್ತುತ ಇವರು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ಉಡುಪಿ ಇದರ ಅಥ್ಲೆಟಿಕ್ಸ್ ವಿಭಾಗದ ಕೋಚ್ ಸಮರ್ಥ್ ಸದಾಶಿವ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
ಸಾಧಕ ವಿದ್ಯಾರ್ಥಿನಿ ಯನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ -ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಕೋಚ್ ಸಮರ್ಥ್ ಸದಾಶಿವ ಅವರು ಅಭಿನಂದಿಸಿದರು.