ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಉಪಮುಖ್ಯಮಂತ್ರಿ ಡಿಕೆಶಿ ಭೇಟಿ :
*ಬಂಟರ ನಿಗಮ ಸ್ಥಾಪನೆಗೆ ಮನವಿ*
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ಪದಾಧಿಕಾರಿಗಳೊಂದಿಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ಅವರನ್ನು ಒಳಗೊಂಡ ಒಕ್ಕೂಟದ ನಿಯೋಗ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.
ಬಂಟರ ಯಾನೆ ನಾಡವರ ನಿಗಮ ಸ್ಥಾಪನೆಗೆ ಮನವಿ ಮಾಡಿದರು.
ಹಾಗೆಯೇ ಬಂಟರ ಮೀಸಲಾತಿಯ ಬಗ್ಗೆ ಕ್ರಮ ಕೈಕೊಂಡು ಬಂಟರ ಸಮುದಾಯ 3B ಯಿಂದ 2A ಗೆ ಸೇರ್ಪಡೆ ಗೊಳಿಸ ಬೇಕೆಂದು ವಿನಂತಿಸಿದರು.
ಒಕ್ಕೂಟದ ಮನವಿಯನ್ನು ಪರಿಶೀಲಿಸಿ ಬೇಡಿಕೆಗಳ ಕುರಿತು ಸ್ಪಂದಿಸುವುದಾಗಿ ಭರವಸೆ ನೀಡಿದರು.
ಈ ಸಂಧರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸಂಸದ ಡಿ ಕೆ ಸುರೇಶ್ ಉಪಸ್ಥಿತರಿದ್ದರು.