ತೆಲಂಗಾಣದ ಖ್ಯಾತ ಕ್ರಾಂತಿಕಾರಿ ಗಾಯಕ ಗದ್ದರ್ ನಿಧನ
ತೆಲಂಗಾಣದ ಖ್ಯಾತ ಕ್ರಾಂತಿಕಾರಿ ಗಾಯಕ ಗದ್ದರ್ ನಿಧನ
ತೆಲಂಗಾಣ: ತೆಲಂಗಾಣದ ಕ್ರಾಂತಿಕಾರಿ ಗಾಯಕ ಗದ್ದರ್ ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಗದ್ದರ್‌ರವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗದ್ದರ್ ಇಂದು ಕೊನೆಯುಸಿರೆಳೆದಿದ್ದಾರೆ.
ಗುಮ್ಮಡಿ ವಿಟ್ಟಲ್ ರಾವ್ (ಜನನ 1949), ಗದ್ದರ್ ಎಂದೇ ಚಿರಪರಿಚಿತರಾಗಿದ್ದರು. ಇವರು ಕ್ರಾಂತಿಕಾರಿ ಕವಿ ಮತ್ತು ಮಾಜಿ ನಕ್ಸಲೈಟ್ ನಾಯಕ.
2010ರವರೆಗೆ ನಕ್ಸಲ್ ಚಳವಳಿಯಲ್ಲಿ ಸಕ್ರೀಯವಾಗಿದ್ದ ಅವರು ನಂತರ ತೆಲಂಗಾಣ ರಾಜ್ಯ ರಚನೆಗಾಗಿ ಚಳವಳಿಯಲ್ಲಿ ಸೇರಿಕೊಂಡರು.
ತೆಲಂಗಾಣ ಚಳವಳಿಯ ಸಮಯದಲ್ಲಿ ಗದ್ದರ್ ಅವರು ತಮ್ಮ ಹಾಡುಗಳಿಂದಲೇ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರು ತೆಲಂಗಾಣ ಚಳವಳಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು, ಈ ಭಾಗದಲ್ಲಿ ಅನ್ಯಾಯಗಳನ್ನು ಪರಿಹರಿಸಲು ತಮ್ಮ ಸಂಗೀತವನ್ನು ಬಳಸಿದರು.
ಗದ್ದರ್ ಅನೇಕ ಯುವಕರನ್ನು ಕ್ರಾಂತಿಕಾರಿ ಚಳುವಳಿಗಳಲ್ಲಿ ಸೇರಲು ಪ್ರೇರೇಪಣೆ ನೀಡಿದ್ದಾರೆ. ಇತ್ತೀಚೆಗೆ ಖಮ್ಮಂನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಗದ್ದರ್ ಭಾಗವಹಿಸಿದ್ದರು.
1949ರಲ್ಲಿ ತೂಪ್ರಾನ್‌ನಲ್ಲಿ ಗುಮ್ಮಡಿ ವಿಠಲ್ ರಾವ್ ಆಗಿ ಜನಿಸಿದ ಗದ್ದರ್ 2010ರವರೆಗೆ ನಕ್ಸಲಿಸಂ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು. ನಂತರ ಅವರು ತೆಲಂಗಾಣ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾದರು.
ಗದ್ದರ್ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು (ಭಾನುವಾರ) ಅವರು ಕೊನೆಯುಸಿರೆಳೆದಿದ್ದಾರೆ.