# Tags
#ಅಪರಾಧ

ನಿರಂತರ ಹೋರಾಟದ ಫಲಶ್ರುತಿ: ನಿಖಿತಾ ಕುಟುಂಬಕ್ಕೆ 20 ಲ. ರೂ.ಗಳ ಪರಿಹಾರ

ನಿರಂತರ ಹೋರಾಟದ ಫಲಶ್ರುತಿ: ನಿಖಿತಾ ಕುಟುಂಬಕ್ಕೆ 20 . ರೂ.ಗಳ ಪರಿಹಾರ

ಉಡುಪಿ: ನಿರಂತರ ಹೋರಾಟದ ಫಲಶ್ರುತಿಯಾಗಿ ಉಡುಪಿಯ ಖಾಸಗಿ ಆಸ್ಪತ್ರೆಯು ಮಾನವೀಯ ನೆಲೆಯಲ್ಲಿ ಇತ್ತೀಚೆಗೆ ಆಸ್ಪತ್ರೆಯಲ್ಲಿ ನಿಧನರಾದ ಕಾಲೇಜು ವಿದ್ಯಾರ್ಥಿನಿ ನಿಖಿತಾ ಅವರ ಕುಟುಂಬಕ್ಕೆ 20 ಲಕ್ಷ. ರೂ.ಗಳ ಪರಿಹಾರ ಧನವನ್ನು ಹಸ್ತಾಂತರ ಮಾಡಿದೆ.

 ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ಳೂರು,  ಕುಟುಂಬದ ನೋವಿಗೆ ಸ್ಪಂದಿಸಿದ ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳ ಸ್ಪಂದನೆ ಶ್ಲಾಘನೀಯ. ಈ ಬಗ್ಗೆ ಧ್ವನಿಯೆತ್ತಿ ಸಂಘಟಿತವಾದ ಅಳಲು ತೋಡಿಕೊಂಡು ಸಾಮಾಜಿಕ ನ್ಯಾಯ ಕೊಡಿಸಲು ಪಣತೊಟ್ಟಿದ್ದ ಸರ್ವರೂ ಅಭಿನಂದನರ್ಹರು. ಸಂಘ ಸಂಸ್ಥೆ ಸಂಘಟನೆಗಳು ಈ ರೀತಿಯ ಸಮಾಜಮುಖಿ ಕೆಲಸಗಳನ್ನ ಮಾಡಬೇಕು. ನೊಂದವರ ಕಣ್ಣೀರು ಒರೆಸಬೇಕು ಎಂದಿದ್ದಾರೆ.

 ಘಟನೆ ಬಳಿಕ ಆರಂಭವಾದ ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳ ಹೋರಾಟದ ಕಾವು, ಹಲವು ಮನವಿಗಳು ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಕುಲಾಲ ಸಮುದಾಯ ಸಂಘಟನೆಯ ನಾಯಕರು, ಸಾಮಾಜಿಕ ಹೋರಾಟಗಾರರು ನಿರಂತರ ಮಾತುಕಥೆಯನ್ನು ನಡೆಸಿದ್ದರ ಪರಿಣಾಮ ಇಂದು ಫಲ ಸಿಕ್ಕಂತಾಗಿದೆ ಎಂದರು.

ನಿಖಿತಾ ತಂದೆ-ತಾಯಿಗೆ ಈ ಪರಿಹಾರ ಹಣ ಮಗಳ ಸಾವಿಗೆ ಸಮಾಧಾನ ನೀಡದು. ಆದರೆ ಮಗಳಿಗಾಗಿ ಕಟ್ಟಿದ ಹೊಸ ಮನೆಯ ಸಾಲ ತೀರಿಸಲು ಬೇರೆ ಮಕ್ಕಳಿಲ್ಲದ ಅವರ ನಾಳೆಯ ಬದುಕಿಗೆ ಪುಟ್ಟ ಆಸರೆಯಂತೂ ಖಂಡಿತಾ ಆದೀತು. ಒಂದು ನ್ಯಾಯಪರ ಹೋರಾಟ, ಸಮುದಾಯ ಸಂಘಟನೆಗಳ ಮನವಿಗಳಿಗೆ ಸಿಕ್ಕ ಜಯವಿದು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 ನಿಖಿತ ಅವರು ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಈ ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ನಿಖಿತಾ ಅವರ ಪರ ನ್ಯಾಯದ ಕೂಗನ್ನು ಎಬ್ಬಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು, ಪ್ರಜ್ಞಾವಂತ ಹೋರಾಟದ ಮನಸ್ಸುಗಳ ನಿರಂತರ ಹೋರಾಟದ ಫಲವೇ ಇಂದು ನಿಖಿತಾ ಅವರ ಕುಟುಂಬಕ್ಕೆ ಸಹಾಯಧನದ ನೆರವು ಸಿಕ್ಕುವಂತೆ ಮಾಡಿದೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2