ಪಡುಬಿದ್ರಿಯಲ್ಲಿ ಬಾರಿ ಗಾಳಿ ಮಳೆಗೆ ಮನೆ ಮೇಲೆ ಉರುಳಿದ ಮರ: ಶಾಸಕ, ಅಧಿಕಾರಿಗಳ ಭೇಟಿ
ಪಡುಬಿದ್ರಿಯಲ್ಲಿ ಬಾರಿ ಗಾಳಿ ಮಳೆಗೆ ಮನೆ ಮೇಲೆ ಉರುಳಿದ ಮರ: ಶಾಸಕ, ಅಧಿಕಾರಿಗಳ ಭೇಟಿ
ಪಡುಬಿದ್ರಿ ಕಂಚಿನಡ್ಕದಲ್ಲಿ ಭಾನುವಾರ ಬೀಸಿದ ಬಾರೀ ಗಾಳಿ ಮಳೆಗೆ ಇಲ್ಲಿನ ನಿವಾಸಿ ಇಂದಿರಾ ಅವರ ಮನೆ ಮೇಲೆ ಮರ ಬಿದ್ದು ಹಾನಿ ಉಂಟಾಗಿದ್ದು, ಭಾನುವಾರ ಇಲಾಖಾಧಿಕಾರಿಗಳೊಂದಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಶಾಸಕ ಗುರಮೆಯವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ನಯನ, ಜ್ಯೋತಿ, ಪಡುಬಿದ್ರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಶಕ್ತಿ ಕೇಂದ್ರದ ಕೃಷ್ಣ ಕಂಚಿನಡ್ಕ, ಬೂತ್ ಅಧ್ಯಕ್ಷರಾದ ಶಿವಾನಂದ, ಪ್ರಭಾಕರ, ಗ್ರಾಮ ಲೆಕ್ಕಾಧಿಕಾರಿಗಳಾದ ಮತಾಯಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.