ಪಡುಬಿದ್ರಿ : ಎಸ್ಸೆಸ್ಸೆಫ್‌ನಿಂದ ಮಾಧಕ ವ್ಯಸನದ ವಿರುದ್ಧ ವಾಕಥಾನ್ ಜಾಥಾ (Padubidri : Walkathon Jatha Against drug addiction by SSF)
ಪಡುಬಿದ್ರಿ : ಎಸ್ಸೆಸ್ಸೆಫ್‌ನಿಂದ ಮಾಧಕ ವ್ಯಸನದ ವಿರುದ್ಧ ವಾಕಥಾನ್ ಜಾಥಾ
(Padubidri) ಪಡುಬಿದ್ರಿ: ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕಾಪು ವಿಭಾಗದ ಅಧೀನದಲ್ಲಿ ಮಾಧಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕ್ಯಾಂಪಸ್ ವಿದ್ಯಾರ್ಥಿಗಳ “ಸ್ಟೂಡೆಂಟ್ಸ್ ವಾಕಥಾನ್” ಕಾಲ್ನಡಿಗೆ ಜಾಥಾವು ಪಡುಬಿದ್ರಿಯಲ್ಲಿ ಶನಿವಾರ ನಡೆಯಿತು.
ಪಡುಬಿದ್ರಿಯ ಕಾರ್ಕಳ ರಸ್ತೆಯಿಂದ ಹೊರಟ ಜಾಥಾವು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿ, ಪಡುಬಿದ್ರಿ ಪೇಟೆಯಲ್ಲಿ ಸಮಾರೋಪಗೊಂಡಿತು.
ಕಾಪು ಸೆಂಟರ್ ಅಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಪ್ರಾರ್ಥನೆ ಸಲ್ಲಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಎಸ್ಸೆಸ್ಸೆಫ್ ರಾಜ್ಯಮಟ್ಟದಲ್ಲಿ ಆಗಸ್ಟ್ ೨೪, ೨೫ರಂದು ಮೈಸೂರಿನಲ್ಲಿ ನಡೆಯುವ ಐತಿಹಾಸಿಕ ವಿದ್ಯಾರ್ಥಿ ಸಮಾವೇಶದ ಅಂಗವಾಗಿ ಈ ಜಾಥಾವು ನಡೆಯಿತು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ರಕೀಬ್ ಕನ್ನಂಗಾರ್ ಮುನ್ನುಡಿ ಮಾತಿನೊಂದಿಗೆ ಉದ್ಘಾಟಿಸಿದರು.
ಪಡುಬಿದ್ರಿ ಪೋಲೀಸ್ ಠಾಣಾ ಎಎಸ್‌ಐ ರಾಜೇಶ್ ಕೆ. ಜಾಥಾದಲ್ಲಿ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಎಂ.ಕೆ. ಇಬ್ರಾಹಿಂ ಮಜೂರು, ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಶಾಹುಲ್ ಹಮೀದ್ ನಈಮಿ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಲತೀಫ್ ಶಿರ್ವ, ಅಹ್ಮದ್ ಜಾಬೀರ್ ಮುಳೂರು, ಜಿಲ್ಲಾ ಸದಸ್ಯರಾದ ತೌಸೀರ್ ಪಡುಬಿದ್ರಿ, ಜುನೈದ್ ಪಕೀರ್ಣಕಟ್ಟೆ, ಎಸ್ಸೆಸ್ಸೆಫ್ ಪಡುಬಿದ್ರಿ ಶಾಖಾಧ್ಯಕ್ಷ ಝಹೀರ್ ಪಡುಬಿದ್ರಿ, ನಾಯಕರಾದ ಹನೀಫ್ ಹಾಜಿ ಕನ್ನಂಗಾರ್, ಇಮ್ರಾನ್ ಬಶೀರ್ ಕೊರಂಟಿ ಕಟ್ಟೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಕಾಪು ಡಿವಿಷನ್ ಅಧ್ಯಕ್ಷ ತೌಫೀಕ್ ಪಕೀರ್ಣಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಕ್ಯಾಂಪಸ್ ಕಾರ್ಯದರ್ಶಿ ಅನ್ಫಾಲ್ ಪೊಲ್ಯ ಧನ್ಯವಾದ ಸಲ್ಲಿಸಿದರು.