# Tags
#health

  ಪಡುಬಿದ್ರಿ: ಮನೆಗೆ  ತಂದ ತರಕಾರಿಯಲ್ಲಿತ್ತು ಹೆಬ್ಬಾವಿನ ಮರಿ, ಹೌಹಾರಿದ ಮನೆ ಮಂದಿ (Padubidri: There was a baby python in the vegetables brought home)

   ಪಡುಬಿದ್ರಿ: ಮನೆಗೆ  ತಂದ ತರಕಾರಿಯಲ್ಲಿತ್ತು ಹೆಬ್ಬಾವಿನ ಮರಿ, ಹೌಹಾರಿದ ಮನೆ ಮಂದಿ

 (Padubidri) ಪಡುಬಿದ್ರಿ, ಜು. 13: ತರಕಾರಿ ಅಂಗಡಿಯಿಂದ ತಂದ ಕಾಲಿಫ್ಲವರನ್ನು ಗುರುವಾರ ರಾತ್ರಿ ತಂದು ಫ್ರಿಡ್ಜಲ್ಲಿಟ್ಟು, ಶುಕ್ರವಾರ ಬೆಳಿಗ್ಗೆ ಉಪಯೋಗಿಸಲು ತೆಗೆದಾಗ ಅದರೊಳಿಗಿಂದ ಹೆಬ್ಬಾವಿನ ಮರಿಯೊಂದು ಹೊರ ಬಂದಿದೆ.  

 ಪಡುಬಿದ್ರಿಯ ಪಿ.ಕೆ. ಅರುಣ್ ಕುಮಾರ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ.

ತರಕಾರಿಯೊಳಗಿಂದ ಬರುತ್ತಿರುವ ದೃಷ್ಯವನ್ನು ತಮ್ಮ ಮೊಬೈಲಿನಿಂದ ಅವರು ಚಿತ್ರೀಕರಿಸಿದ್ದಾರೆ. ಇದು ಈಗ ವೈರಲ್‌ ಆಗಿದೆ.

ಸಾರ್ವಜನಿಕರು ಮಳೆಗಾಲದಲ್ಲಿ ತರಕಾರಿ ಅಂಗಡಿಗಳಿಂದ ತಂದ ತರಕಾರಿಗಳನ್ನು ಸರಿಯಾಗಿ ಪರೀಕ್ಷಿಸಿ ಜಾಗರೂಕರಾಗಿರಬೇಕಾದುದು ಅತ್ಯವಶ್ಯಕ ಎಂದು ಅರುಣ್‌ ಅವರು ಹೇಳಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2