ಬಿ.ಕೆ ಹರಿಪ್ರಸಾದ್ ಅವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಹೋರಾಟ – ಉಡುಪಿಯಲ್ಲಿ ಪ್ರಣವಾನಂದ ಶ್ರೀ
ಬಿ.ಕೆ ಹರಿಪ್ರಸಾದ್ ಅವರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಹೋರಾಟ – ಉಡುಪಿಯಲ್ಲಿ ಪ್ರಣವಾನಂದ ಶ್ರೀ
ಉಡುಪಿ: ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಸರಕಾರ ಸೂಕ್ತ ಸ್ಥಾನಮಾನ ನೀಡಬೇಕು. ಆಗಸ್ಟ್ 2 ರಂದು ಅವರನ್ನು ವರಿಷ್ಠರು ದೆಹಲಿಗೆ ಕರೆದಿದ್ದಾರೆ. ಅಲ್ಲಿ ಸೂಕ್ತ ಸ್ಥಾನಮಾನ ಸಿಗುವ ಭರವಸೆ ಇದೆ ಎಂದು ಪ್ರಣವಾನಂದ ಶ್ರೀ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು , ಸಮುದಾಯ ಯಾವತ್ತೂ ಬಿ.ಕೆ ಹರಿಪ್ರಸಾದ್ ಅವರ ಬೆನ್ನಿಗಿದೆ. ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ.
ಸುಮಾರು 19 ವರ್ಷಗಳ ಕಾಲ ರಾಜ್ಯಸಭೆ ಸದಸ್ಯರಾಗಿದ್ದ ಹರಿಪ್ರಸಾದ್ ಅವರ ಕೊಡುಗೆ ಅಪಾರ. ಅವರನ್ನು ಪಕ್ಷವು ಕಡೆಗಣಿಸಿದರೆ ನಮ್ಮ ಸಮಾಜ ಸುಮ್ಮನಿರುವುದಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿರುವ ಈಡಿಗ ಸಮಾಜದವನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡುತ್ತೇವೆ. ಈ ಸಮಾಜವನ್ನು ಯಾವುದೇ ರಾಜಕೀಯ ಪಕ್ಷವು ಕಡೆಗಣಿಸಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.