ಬೆಳ್ತಂಗಡಿ ಕಳೆಂಜದಲ್ಲಿ ವ್ಯಕ್ತಿಗೆ ಚಾಕು ಇರಿತ : ಸ್ಥಿತಿ ಗಂಭೀರ (Man stabbed in Belthangadi kalenja: Condition critical)
ಬೆಳ್ತಂಗಡಿ ಕಳೆಂಜದಲ್ಲಿ ವ್ಯಕ್ತಿಗೆ ಚಾಕು ಇರಿತ : ಸ್ಥಿತಿ ಗಂಭೀರ
(Belthangadi) ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ಖ್ಯಾತೆ ತೆಗೆದು ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಭೀಕರವಾಗಿ ಇರಿಯಲಾಗಿದೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಜೇಶ್ ಎಂಕೆ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ..
ಘಟನೆಯ ವಿವರ
ಕಳೆಂಜ ಗ್ರಾಮದಲ್ಲಿ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾದ ಕುಶಾಲಪ್ಪ ಗೌಡ ಎಂಬ ವ್ಯಕ್ತಿಗೂ ರಾಜೇಶ್ ಎಂಬಾತನಿಗೂ ನಡುವೆ ಈ ಹಿಂದೆಯೂ ಜಾಗದ ವಿಚಾರದಲ್ಲಿ ಕಿರಿಕ್ ನಡೆದಿತ್ತು. ಆ ಬಳಿಕ ಪದೇ ಪದೇ ಇವರಿಬ್ಬರ ನಡುವೆ ಸಾಕಷ್ಟು ಬಾರಿ ವಾಕ್ ಸಮರ ನಡೆದಿತ್ತು ಎನ್ನಲಾಗಿದೆ.
ಇದೀಗ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೇ ಕುಶಾಲಪ್ಪ, ರಾಜೇಶ್ ಬಳಿ ಖ್ಯಾತೆ ತೆಗೆದಿದ್ದಾನೆ. ಜೀಪಿನಲ್ಲಿ ಕುಳಿತಿದ್ದ ರಾಜೇಶ್ ಬಳಿ ರಾಜಕೀಯ ವಿಚಾರವಾಗಿ ಗಲಾಟೆ ಮಾಡಿದ್ದು ಬಳಿಕ ಜಾತಿ ನಿಂದನೆ ಮಾಡಿದ್ದಾನೆ. ಈ ವೇಳೆ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಈ ಸಂದರ್ಭದಲ್ಲಿ ಕುಶಾಲಪ್ಪಗೌಡ ಚಾಕುವಿನಿಂದ ರಾಜೇಶ್ ಗೆ ಇರಿದಿದ್ದಾನೆ. ಘಟನೆಯಲ್ಲಿ ರಾಜೇಶ್ ಗೆ ಗಂಭೀರ ಗಾಯಗಳಾಗಿದ್ದು, ಉಜಿರೆಯ ಬೆನಕ ಹೆಲ್ತ್ ಸೆಂಟರ್ ಗೆ ದಾಖಲಿಸಲಾಗಿದೆ.
ಇನ್ನು ಹಲ್ಲೆಗೊಳಗಾಗಿರುವ ರಾಜೇಶ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.
ಬೆಳ್ತಂಗಡಿ ಪೊಲೀಸರು ಪ್ರಕರಣ ದಾಕಲಿಸಿಕೊಂಡಿದ್ದಾರೆ.